ವಾಸ್ತು ಶಾಸ್ತ್ರದ ಪ್ರಕಾರ ಗುರುವಾರ ಕೆಲ ಕೆಲಸಗಳನ್ನು ಮಾಡಬಾರದು. ನಾವು ಮಾಡುವ ಕೆಲಸ ನಮ್ಮ ಕುಟುಂಬದವರ ಮೇಲೆ ಪರಿಣಾಮ ಬೀರುತ್ತದೆ. ಮಹಿಳೆ ಗುರುವಾರ ಈ ಕೆಲಸ ಮಾಡಿದ್ರೆ ಆಕೆ ತಂದೆ ಅಥವಾ ಪತಿಗೆ ಹಾನಿಯಾಗುವ ಸಾಧ್ಯತೆಯಿರುತ್ತದೆ. ಪತಿಯ ಆಯಸ್ಸು ಕಡಿಮೆಯಾಗುವ ಸಾಧ್ಯತೆಯಿರುತ್ತದೆ.
ಗ್ರಂಥಗಳ ಪ್ರಕಾರ ಗುರುವಾರ ಮಹಿಳೆ ತಲೆ ಸ್ನಾನ ಮಾಡಬಾರದು. ಕೂದಲು ಕತ್ತರಿಸಬಾರದು. ತಲೆ ಸ್ನಾನ ಮಾಡುವ ಅಥವಾ ಕೂದಲು ಕತ್ತರಿಸಿದ್ರೆ ಗುರು ದುರ್ಬಲನಾಗ್ತಾನೆ. ಪತಿ ಹಾಗೂ ಮಗುವಿನ ಪ್ರಗತಿಗೆ ಅಡ್ಡಿಯುಂಟಾಗುತ್ತದೆ.
ಗುರುವಾರ ಕಸವನ್ನು ಮನೆಯಿಂದ ಹೊರಗೆ ಹಾಕಬಾರದಂತೆ. ವಾಸ್ತು ಪ್ರಕಾರ ಗುರುವಾರ ಮನೆಯನ್ನು ಸ್ವಚ್ಛಗೊಳಿಸಿದ್ರೆ ಮಕ್ಕಳ ಶಿಕ್ಷಣ, ಧರ್ಮದ ಶುಭ ಪ್ರಭಾವ ನಷ್ಟವಾಗುತ್ತದೆಯಂತೆ.
ಗುರುವಾರ ಬಟ್ಟೆ ತೊಳೆಯಬಾರದು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಗುರುವಾರ ಬಟ್ಟೆ ಸ್ವಚ್ಛಗೊಳಿಸಿದ್ರೆ ಹಣಕಾಸಿನ ತೊಂದರೆ ಎದುರಾಗುತ್ತದೆ. ಸದಾ ಆರ್ಥಿಕ ಸಮಸ್ಯೆ ಕಾಡುತ್ತದೆ. ನೆನಪಿರಲಿ ಕೊಡು ಕೊಳ್ಳುವಿಕೆ ವ್ಯವಹಾರ ಕೂಡ ಸೂರ್ಯ ಮುಳುಗಿದ ಮೇಲೆ ಮಾಡಬೇಕು.