ಬೆಂಗಳೂರು : 2,000 ರೂಪಾಯಿಗೆ ಕರೆಂಟ್ ಕದಿಬೇಕಾ ನಾನು? ಎಂದು ಕಾಂಗ್ರೆಸ್ ಗೆ ಮಾಜಿ ಸಿಎಂ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಅಕ್ರಮ ವಿದ್ಯುತ್ ಸಂಪರ್ಕ ಆರೋಪ ಸಂಬಂಧ ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದರು. 2,000 ರೂಪಾಯಿಗೆ ಕರೆಂಟ್ ಕದೀಬೇಕಾ ನಾನು?, ಕಾಂಗ್ರೆಸ್ನವರಿಗೆ ಬೇರೆ ಯಾವುದೇ ಕೆಲಸ ಇಲ್ಲ , ಇದನ್ನೇ ದೊಡ್ಡದು ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.
ಅಂತಹ ದೊಡ್ಡ ಅಪರಾಧ ನಡೆದಿಲ್ಲ, ನಾನೇನು ದೇಶ ಲೂಟಿ ಮಾಡಿಲ್ಲ. 2,000 ರೂಪಾಯಿಗೆ ಕರೆಂಟ್ ಕದೀಬೇಕಾ ನಾನು? ಎಂದರು. ಕಾಂಗ್ರೆಸ್ಗೆ ದೊಡ್ಡ ದೊಡ್ಡ ಹಗರಣ ಬಯಲಿಗೆ ತರುವ ಧೈರ್ಯವಿಲ್ಲ. ಕಾಂಗ್ರೆಸ್ನವರು ರಾಜ್ಯವನ್ನು ಬೆಳಗಿಸಿರುವುದನ್ನು ನೋಡಿದ್ದೇನೆ.ಇದರಲ್ಲಿ ಮುಚ್ಚುಮರೆ ಏನೂ ಇಲ್ಲ. ಈ ಅಚಾತುರ್ಯಕ್ಕೆ ನನ್ನ ವಿಷಾದವಿದೆ. ಬೆಸ್ಕಾಂ ಅಧಿಕಾರಿಗಳು ಬಂದು ಪರೀಕ್ಷೆ ಮಾಡಿ ನೋಟಿಸ್ ನೀಡಲಿ. ದಂಡ ಕಟ್ಟುತ್ತೇನೆ ಎಂದು ಹೆಚ್ಡಿಕೆ ಹೇಳಿಕೆ ನೀಡಿದರು.