alex Certify ಮದುವೆ ದಿನ ಯುವತಿಯ ಮುಖದ ಕಾಂತಿ ಹೆಚ್ಚಾಗಬೇಕಾ…..? ಅನುಸರಿಸಿ ಈ ಆಹಾರ ಸೂತ್ರ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ದಿನ ಯುವತಿಯ ಮುಖದ ಕಾಂತಿ ಹೆಚ್ಚಾಗಬೇಕಾ…..? ಅನುಸರಿಸಿ ಈ ಆಹಾರ ಸೂತ್ರ….!

ಮದುವೆ ದಿನ ತಾನು ಚೆನ್ನಾಗಿ ಕಾಣಬೇಕು ಎಂಬ ಆಸೆ ಯಾವ ಹೆಣ್ಣಿಗೆ ಇರೋಲ್ಲ ಹೇಳಿ.

ಇದಕ್ಕಾಗಿ ಯುವತಿಯರು ನೂರಾರು ಕ್ರೀಂಗಳನ್ನ ಟ್ರೈ ಮಾಡ್ತಾರೆ. ಬ್ಯೂಟಿ ಪಾರ್ಲರ್​ಗೆ ಹೋಗಿ ಸಾವಿರಾರು ರೂಪಾಯಿ ಖರ್ಚು ಮಾಡ್ತಾರೆ. ಆದರೆ ಇದು ಎಲ್ಲರ ತ್ವಚೆಗೂ ವರ್ಕೌಟ್​ ಆಗೋದಿಲ್ಲ.

ಹಾಗಂತ ನೀವು ತಲೆಕೆಡಿಸಿಕೊಳ್ಳಬೇಕು ಅಂತೇನಿಲ್ಲ. ಮದುವೆಗೆ ಇನ್ನೇನು ಮೂರ್ನಾಲ್ಕು ತಿಂಗಳು ಬಾಕಿ ಇದೆ ಅನ್ನೋವಾಗ ನಿಮ್ಮ ನಿತ್ಯದ ಡಯಟ್​ನಲ್ಲಿ ಈ ಆಹಾರ ಪದಾರ್ಥಗಳನ್ನ ಸೇವಿಸೋದ್ರಿಂದ ಮುಖದ ಕಾಂತಿ ನೈಸರ್ಗಿಕವಾಗಿಯೇ ಹೆಚ್ಚಲಿದೆ.

ಮದುವೆಗೆ ಇನ್ನೇನು ಕೆಲ ತಿಂಗಳು ಬಾಕಿ ಇದೆ ಅನ್ನೋವಾಗ ಸಾಧ್ಯವಾದಷ್ಟು ಹಸಿರು ತರಕಾರಿಗಳನ್ನ ಸೇವಿಸಿ. ಆದಷ್ಟು ಎಣ್ಣೆಯಲ್ಲಿ ಕರಿದ ಪದಾರ್ಥ ಹಾಗೂ ಜಂಕ್​ ಫುಡ್​ಗಳನ್ನ ತಿನ್ನೋದನ್ನ ಕಡಿಮೆ ಮಾಡಿ. ಸಂಪೂರ್ಣವಾಗಿ ಈ ಅಭ್ಯಾಸ ತ್ಯಜಿಸಿದ್ರೆ ಇನ್ನೂ ಒಳ್ಳೆಯದು. ಇದರ ಜೊತೆಯಲ್ಲಿ ಚಹ, ಕಾಫಿ, ಸಿಗರೇಟ್​ ಸೇದುವ ಅಭ್ಯಾಸವಿದ್ದರೆ ಬಿಟ್ಟು ಬಿಡಿ. ದಿನಕ್ಕೆ ಮೂರರಿಂದ ನಾಲ್ಕು ಲೀಟರ್​ ನೀರು ಕುಡಿಯೋಕೆ ಮರೆದಿರಿ. ಇದರ ಜೊತೆಯಲ್ಲೇ ಮನೆಯಲ್ಲೇ ಹಾಲಿನ ಕೆನೆ, ಅರಿಶಿಣ ಬಳಸಿ ಫೇಸ್ ಪ್ಯಾಕ್​ ಕೂಡ ಮಾಡಿಕೊಳ್ಳಬಹುದು. ಅಕ್ಕಿ ಹಿಟ್ಟನ್ನ ನೀರಿಗೆ ಮಿಶ್ರ ಮಾಡಿ ಸ್ಕ್ರಬ್​ ರೀತಿಯಲ್ಲಿ ಬಳಕೆ ಮಾಡಬಹುದು. ಈ ಎಲ್ಲ ಅಭ್ಯಾಸಗಳನ್ನ ಮೈಗೂಡಿಸಿಕೊಳ್ಳೋದ್ರಿಂದ ನಿಮ್ಮ ಮುಖ ಹೊಳೆಯೋದ್ರಲ್ಲಿ ಡೌಟೇ ಇಲ್ಲ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...