alex Certify ಟೀ ಕುಡಿಯಲು ಹೋದಾಗ ನಗದು ಸೇರಿದಂತೆ ಸ್ಮಾರ್ಟ್‌ ವಾಚ್‌ ದೋಚಿದ ಕಳ್ಳರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೀ ಕುಡಿಯಲು ಹೋದಾಗ ನಗದು ಸೇರಿದಂತೆ ಸ್ಮಾರ್ಟ್‌ ವಾಚ್‌ ದೋಚಿದ ಕಳ್ಳರು

ಟೀ ಕುಡಿಯಲು ಹೋಗಿದ್ದ ವೇಳೆ ಎಲೆಕ್ಟ್ರಾನಿಕ್ಸ್ ಅಂಗಡಿಯಿಂದ 54 ಸಾವಿರ ರೂ. ನಗದು ಸೇರಿದಂತೆ ನಾಲ್ಕು ಸ್ಮಾರ್ಟ್ ವಾಚ್ ಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.

ದಕ್ಷಿಣ ಬೆಂಗಳೂರಿನ ಬನಶಂಕರಿ 2ನೇ ಹಂತದ ಸುಬ್ರಹ್ಮಣ್ಯಪುರ ಮುಖ್ಯರಸ್ತೆಯಲ್ಲಿರುವ ಎಮ್‌ಆರ್ ಎಲೆಕ್ಟ್ರಾನಿಕ್ಸ್ ಅಂಗಡಿಯಿಂದ 39 ವರ್ಷದ ಮುಖ್ತಿಯಾರ್ ಅವರು ನವೆಂಬರ್ 3 ರಂದು ರಾತ್ರಿ 10 ಗಂಟೆ ಸುಮಾರಿಗೆ ಹತ್ತಿರದ ಅಂಗಡಿಯೊಂದರಲ್ಲಿ ಚಹಾ ಕುಡಿಯಲು ಹೋಗಿದ್ದಾರೆ.

ತನ್ನ ಎಂದಿನ ಅಭ್ಯಾಸದಂತೆ ಅಂಗಡಿ ಮುಚ್ಚದೇ ಟೀ ಕುಡಿಯಲು ಹೋಗಿದ್ದ ಅವರು ಸುಮಾರು ಅರ್ಧ ಗಂಟೆಯ ನಂತರ ಅಂಗಡಿಗೆ ವಾಪಸ್ಸಾಗಿದ್ದರು. ಬಳಿಕ ಅಂಗಡಿ ಮುಚ್ಚಿ ಕೆಂಗೇರಿ ಸ್ಯಾಟಲೈಟ್ ಟೌನ್‌ನಲ್ಲಿನ ಮನೆಗೆ ತೆರಳಿದ್ದಾರೆ.

ಮರುದಿನ ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಅಂಗಡಿಯನ್ನು ಮತ್ತೆ ತೆರೆದ ಅವರು ನಗದು ಪೆಟ್ಟಿಗೆಯನ್ನು ಪರಿಶೀಲಿಸಿದಾಗ ಕಳ್ಳತನವಾಗಿರೋದು ಗೊತ್ತಾಗಿದೆ. 54,000 ರೂ ನಗದು ಸೇರಿದಂತೆ ನಾಲ್ಕು ಸ್ಮಾರ್ಟ್ ವಾಚ್ ಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ಪ್ರಕರಣದ ಬಗ್ಗೆ ನಾಲ್ಕು ದಿನಗಳ ನಂತರ ನವೆಂಬರ್ 3 ರಂದು ಬನಶಂಕರಿ ಪೊಲೀಸರಿಗೆ ಕಳ್ಳತನದ ಬಗ್ಗೆ ದೂರು ನೀಡಿದ್ದಾರೆ. ತಾನು ಚಹಾ ಕುಡಿಯಲು ಹೋಗಿದ್ದಾಗ ಕಳ್ಳರು ಈ ಕೃತ್ಯ ನಡೆಸಿರುವ ಶಂಕೆಯಿದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಐಪಿಸಿ ಸೆಕ್ಷನ್ 380 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ .

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...