ಸೂಪರ್ ಮಾರ್ಕೆಟ್ ಒಂದಕ್ಕೆ ನುಗ್ಗುತ್ತೀರಿ, ಅಲ್ಲಿ ಬೇಕಾದನ್ನೆಲ್ಲ ಕೊಂಡುಕೊಳ್ಳುತ್ತೀರಿ. ಬಳಿಕ ಬಿಲ್ ಕೌಂಟರ್ಗೆ ಬಂದಾಗ, ಕ್ಯಾಷಿಯರ್ ನಿಮಗೊಂದು ಗಣಿತದ ಪ್ರಶ್ನೆಯೊಂದನ್ನು ಕೇಳುತ್ತಾನೆ. ಅದಕ್ಕೆ ನೀವು ಸ್ವಲ್ಪ ಸಮಯದಲ್ಲೇ ಸರಿ ಉತ್ತರ ನೀಡುತ್ತಿರಿ. ಆಗ ನಿಮ್ಮ ಎಲ್ಲ ಖರೀದಿ, ಪೂರ್ಣ ಉಚಿತ ಎಂದು ಕ್ಯಾಷಿಯರ್ ಬಹುಮಾನ ಘೋಷಿಸುತ್ತಾನೆ..!
ಹೌದು, ಇದು ಕನಸಲ್ಲ. ಈ ಥರದ ಮಳಿಗೆ ಅಮೆರಿಕದ ನ್ಯೂಯಾರ್ಕ್ನಲ್ಲಿದೆ. ಬ್ರಾಂಕ್ಸ್ನಲ್ಲಿನ ಸ್ಟೋರ್ ನಲ್ಲಿ ಇಂಥ ಕೊಡುಗೆಗಳನ್ನು ಗ್ರಾಹಕರಿಗೆ ನೀಡುತ್ತಿದ್ದಾರೆ.
ಏರ್ ಪೋರ್ಟ್ ನಲ್ಲಿ ಸಲ್ಮಾನ್ ರನ್ನು ಅಡ್ಡಗಟ್ಟಿದ್ದ ಭದ್ರತಾ ಸಿಬ್ಬಂದಿಗೆ ಸಿಕ್ಕಿದ್ದೇನು ಗೊತ್ತಾ….?
ಸ್ಥಳೀಯರಿಗೆ ಸಹಾಯ ಮಾಡಲು ಅವರು ಉದ್ದೇಶಿಸಿದಾಗ, ದಾನವಾಗಿ ಕೊಟ್ಟರೆ ಸರಿಯಾಗುವುದಿಲ್ಲ ಎಂದು ಅವರಿಗೆ ಅನಿಸಿತ್ತಂತೆ. ಹಾಗಾಗಿ ಗಣಿತದ ಸುಲಭ ಪ್ರಶ್ನೆ ಕೇಳಿದಂತೆ ಮಾಡಿ, ಅದಕ್ಕೆ ಸರಿ ಉತ್ತರ ಕೊಟ್ಟವರಿಗೆ ಬಹುಮಾನದ ಹೆಸರಿನಲ್ಲಿ ಉಚಿತವಾಗಿ ದಿನಸಿ, ಆಹಾರದ ಪದಾರ್ಥಗಳನ್ನು ಕೊಡುತ್ತಿದ್ದಾರೆ.
ಪ್ರತಿ ಬಾರಿ ವಿಜೇತರ ವಿಡಿಯೋವನ್ನು ತಮ್ಮ ಟಿಕ್ ಟಾಕ್ನಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಸುಮಾರು 36 ಲಕ್ಷ ಫಾಲೋವರ್ಸ್ಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.