ಕೊಡಗು: ಪತಿ ಮಹಾಶಯನೊಬ್ಬ ಗುಂಡು ಹಾರಿಸಿ ಪತ್ನಿಯನ್ನೇ ಬರ್ಬರವಾಗಿ ಕೊಲೆಗೈದಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬೇಟೋಳಿ ಗ್ರಾಮದಲ್ಲಿ ನಡೆದಿದೆ.
ಪತಿ ನಾಯಕಂಡ ಬೋಪಣ್ಣ, ಪತ್ನಿ ಶಿಲ್ಪಾ (36)ಳನ್ನು ಗುಂಡಿಟ್ಟು ಕೊಂದಿದ್ದಾನೆ. ಪತ್ನಿ ಹತ್ಯೆ ಬಳಿಕ ಕೋವಿಯೊಂದಿಗೆ ಪೊಲೀಸರಿಗೆ ಶರಣಾಗಿದ್ದಾನೆ ಆರೋಪಿ.
ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆರೋಪಿ ತನ್ನ ಪತ್ನಿಯನ್ನು ಗುಂಡಿಟ್ಟು ಕೊಲ್ಲಲು ನಿಖರ ಕಾರಣ ತಿಳಿದುಬಂದಿಲ್ಲ.