ಮಹಿಳೆಯ ಶವ ತುಂಡು ತುಂಡು ಮಾಡಿ ಸೂಟ್ ಕೇಸ್ ನಲ್ಲಿ ಸಾಗಾಟ ಮಾಡುತ್ತಿದ್ದ ತಾಯಿ-ಮಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲ್ಕತ್ತಾದಲ್ಲಿ ಸೂಟ್ ಕೇಸ್ ನಲ್ಲಿ ಶವದ ಅವಶೇಷಗಳು ಪತ್ತೆಯಾದ ನಂತರ ತಾಯಿ-ಮಗಳು ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಕುಮಾರ್ತುಲಿ ಘಾಟ್ ಬಳಿ ಈ ಘಟನೆ ನಡೆದಿದ್ದು, ಗಂಗಾ ನದಿಯಲ್ಲಿ ಟ್ರಾಲಿ ಬ್ಯಾಗ್ ಅನ್ನು ವಿಲೇವಾರಿ ಮಾಡಲು ಮಹಿಳೆಯರು ಈ ಪ್ರದೇಶಕ್ಕೆ ಬಂದಿದ್ದರು.ಅನುಮಾನದ ಮೇಲೆ, ಕೆಲವು ಸ್ಥಳೀಯರು ಮಹಿಳೆಯರನ್ನು ತಡೆದರು ಮತ್ತು ನಂತರ, ಪೊಲೀಸರಿಗೆ ಸುದ್ದಿ ಮುಟ್ಟಿಸಿದರು.
ನಂತರ ಬ್ಯಾಗ್ ನ್ನು ಪರಿಶೀಲನೆ ನಡೆಸಿದಾಗ ರಕ್ತಸಿಕ್ತ ದೇಹದ ಭಾಗಗಳು ಪತ್ತೆಯಾಗಿದೆ. ಮಹಿಳೆಯನ್ನು ಕೊಂದು ಶವವನ್ನು ಪೀಸ್ ಪೀಸ್ ಮಾಡಿ ಸೂಟ್ ಕೇಸ್ ಸಾಗಿಸಲಾಗುತ್ತಿತ್ತು,.ಪೊಲೀಸರು ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ದೇಹದ ಭಾಗಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಬಂಧಿತರನ್ನು ಫಾಲ್ಗುಣಿ ಘೋಷ್ ಮತ್ತು ಆಕೆಯ ತಾಯಿ ಆರತಿ ಘೋಷ್ ಎಂದು ಗುರುತಿಸಲಾಗಿದೆ. ದೇಹದ ಭಾಗಗಳು ಮಹಿಳೆಯರಲ್ಲಿ ಒಬ್ಬರ ಅತ್ತೆಯದ್ದು ಎಂದು ಪೊಲೀಸರು ಶಂಕಿಸಿದ್ದಾರೆ.ಈ ಪ್ರಕರಣದಲ್ಲಿ ವಿಚಾರಣೆ ನಡೆಯುತ್ತಿದೆ.