alex Certify ಮಹಿಳೆಯ ಹೊಟ್ಟೆ ಪರೀಕ್ಷಿಸಿ ದಂಗಾದ ವೈದ್ಯರು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯ ಹೊಟ್ಟೆ ಪರೀಕ್ಷಿಸಿ ದಂಗಾದ ವೈದ್ಯರು….!

ಇದ್ದಕ್ಕಿದ್ದಂತೆ ತೂಕ ಏರಿಕೆಯಾದ ಕಾರಣ ವೈದ್ಯರನ್ನು ಭೇಟಿಯಾದ 19 ವರ್ಷದ ಯುವತಿಯೊಬ್ಬರಿಗೆ ಶಾಕ್ ಆಗುವ ವಿಚಾರವೊಂದು ತಿಳಿದು ಬಂದಿದೆ.

ಅಬಿ ಚಾಡ್ವಿಕ್ ಹೆಸರಿನ ಈ ಯುವತಿಯ ಹೊಟ್ಟೆಯು 12ರಿಂದ 18 ಇಂಚಿಗೆ ಇದ್ದಕ್ಕಿದ್ದಂತೆ ಉಬ್ಬಿದೆ. ಆಕೆಯ ದೇಹದ ಬಹುತೇಕ ತೂಕವು ಸೊಂಟದ ಸುತ್ತಲೇ ಕೇಂದ್ರೀಕೃತವಾಗಿದೆ. ಆಕೆಯ ಉಬ್ಬಿದ ಹೊಟ್ಟೆಯನ್ನು ಕಂಡ ಮಂದಿ ಆಕೆ ಗರ್ಭಿಣಿಯಾಗಿರಬೇಕೆಂದುಕೊಂಡಿದ್ದಾರೆ.

ಇದರಿಂದ ಆತಂಕಿತಳಾದ ಅಬಿ ಡಯೆಟ್ ಮಾಡಲು ಆರಂಭಿಸಿ ದೇಹದ ತೂಕವನ್ನು 6ಕೆಜಿಯಷ್ಟು ಇಳಿಸಿಕೊಂಡಿದ್ದಾರೆ. ಆದರೂ ಸಹ ಹೊಟ್ಟೆ ಇಳಿದಿಲ್ಲ. ಏನೋ ಎಡವಟ್ಟಾಗಿದೆ ಎಂದು ವೈದ್ಯಕೀಯ ನೆರವು ಪಡೆಯಲು ನಿರ್ಧರಿಸಿದ್ದಾರೆ ಅಬಿ.

ಹೊಟ್ಟೆಯಲ್ಲಿ ಬಹಳ ನೋವು ಕಾಣಿಸಿಕೊಂಡ ಬಳಿಕ ವೈದ್ಯರ ಬಳಿ ತೆರಳಿದ ಅಬಿಗೆ ಸ್ಕ್ಯಾನಿಂಗ್ ಮಾಡಿಸಿಕೊಂಡ ಬಳಿಕ ತನ್ನ ಹೊಟ್ಟೆಯಲ್ಲಿ 13 ಇಂಚಿನ ಗಂಟಿರುವುದು ತಿಳಿದುಬಂದಿದೆ. ಇದಾದ ಎರಡು ವಾರಗಳ ಬಳಿಕ ವೆಸ್ಟ್‌ ಮಿಡ್‌ಲ್ಯಾಂಡ್ಸ್‌ನ ವಾಲ್ಸಾಲ್ ಮೇನರ್‌ ಆಸ್ಪತ್ರೆಯಲ್ಲಿ ಸರ್ಜರಿ ಮೂಲಕ ಗಂಟನ್ನು ತೆಗೆಸಿದ್ದಾರೆ ಅಬಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...