ಟ್ರಕ್ ನ ಅಡಿಯಲ್ಲಿ ನುಜ್ಜುಗುಜ್ಜಾದರೂ, ಭೀಕರ ಅಪಘಾತದಲ್ಲಿ 46 ವರ್ಷದ ಮಹಿಳೆ ಬದುಕುಳಿದಿದ್ದಾರೆ. ವಾಷಿಂಗ್ಟನ್‌ನಲ್ಲಿ ಘಟನೆ ನಡೆದಿದ್ದು, ಮೌಂಟ್ ವೆರ್ನಾನ್‌ನಲ್ಲಿರುವ ಸ್ಕಗಿಟ್ ನದಿ ಸೇತುವೆಯ ಮೇಲೆ ಟ್ರಕ್ ಒಂದು ಮಹಿಳೆ ಓಡಿಸುತ್ತಿದ್ದ ನಿಸಾನ್ ಅಲ್ಟಿಮಾ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ, ಆನಂತರ ಅದರ ಮೇಲೆ ಏರಿದ ಪರಿಣಾಮವಾಗಿ ಕಾರ್ ನಜ್ಜುಗುಜ್ಜಾಗಿದೆ. ಈ ಫೋಟೋವನ್ನು ನೋಡಿದಾಗ, ಈ ಅಪಘಾತದಿಂದ ಯಾರಾದರೂ ಬದುಕುಳಿಯುವುದು ಅಸಾಧ್ಯವೆಂದೆ ತೋರುತ್ತದೆ. ಆದರೆ, ಮಹಿಳೆ ಅಪಘಾತದಿಂದ ಬದುಕುಳಿದಿರುವುದಲ್ಲದೆ, ಯಾವುದೇ ಮೇಜರ್ ಇಂಜ್ಯುರಿಯಾಗಿಲ್ಲ.
ಭಾರತೀಯ ಸೇನೆಯಿಂದ ಭರ್ಜರಿ ಬೇಟೆ: ಇಬ್ಬರು ಲಷ್ಕರ್ ಉಗ್ರರು ಸೇರಿ 4 ಭಯೋತ್ಪಾದಕರ ಸದೆಬಡಿದ ಯೋಧರು
ಈ ಬಗ್ಗೆ ದಿ ಸಿಯಾಟಲ್ ಟೈಮ್ಸ್‌ಗೆ ವಾಷಿಂಗ್ಟನ್ ನ ಸಂಚಾರಿ ಪೊಲೀಸರು ಸಂದರ್ಶನ ನೀಡಿದ್ದು ಅಪಘಾತದ ಅಷ್ಟು ಡಿಟೇಲ್ಸ್ ಬಿಚ್ಚಿಟ್ಟಿದ್ದಾರೆ. ಸ್ಕಗಿಟ್ ಬ್ರಿಡ್ಜ್ ಮೇಲೆ ಮಹಿಳೆಯ ವಾಹನ, ಮತ್ತೊಂದು ವಾಹನದ ಹಿಂಭಾಗದಲ್ಲಿ ಚಲಿಸುತ್ತಿತ್ತು, ಅದರ ಸಂಚಾರ ನಿಧಾನವಾದ ಮೇಲೆ, ಮಹಿಳೆಯು ತನ್ನ ಕಾರಿನ ವೇಗ ತಗ್ಗಿಸಿದಳು.
ನಂತರ ಅವಳ ಹಿಂದೆ ಸ್ಪೀಡಾಗಿ ಬಂದ ಟ್ರಕ್ ಆಕೆಯ ಕಾರಿಗೆ ಡಿಕ್ಕಿ ಹೊಡೆಯಿತು. ಡಿಕ್ಕಿಯ ರಭಸಕ್ಕೆ ಟ್ರಕ್ ನ ಹಿಂಭಾಗಕ್ಕೋದ ಕಾರನ್ನು ತಪ್ಪಿಸಲು ಪ್ರಯತ್ನಪಡುವಾಗ ಟ್ರಕ್ ಕಾರಿನ ಮೇಲೆಯೆ ಏರಿದೆ. ಅಪಘಾತ ಸ್ಥಳ ಪರಿಶೀಲಿಸಿದಾಗ ನಮಗೂ ಕಾರ್ ಚಾಲಕ ಬದುಕಿರಲು ಸಾಧ್ಯ ಎಂದು ಅನ್ನಿಸಿರಲಿಲ್ಲ, ಆದರೆ ಗಮನಿಸಿ ನೋಡಿದಾಗ ಆಕೆ ಬದುಕಿರುವುದು ಖಚಿತವಾಯಿತು. ಕ್ರೇನ್ ಸಹಾಯದಿಂದ ಟ್ರಕ್ ಎತ್ತಿದ ನಂತರ ಆಕೆಯೆ ಹೊರಬಂದಳು. ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದವು, ಆಕೆಯನ್ನ ತಕ್ಷಣ ಆಸ್ಪತ್ರೆಗೆ ಕಳುಹಿಸಿದೆವು. ತೀರಾ ಹತ್ತಿರ ಟ್ರಕ್ ಚಲಾಯಿಸಿದ್ದಕ್ಕಾಗಿ ಟ್ರಕ್ ಚಾಲಕನಿಗೆ 189 ಡಾಲರ್ ದಂಡ ವಿಧಿಸಿದ್ದೇವೆ ಎಂದು ಸಂಚಾರಿ ಆಧಿಕಾರಿ ರಾಕಿ ಒಲಿಫ್ಯಾಂಟ್ ಮಾಹಿತಿ ನೀಡಿದ್ದಾರೆ.