ನೋಯ್ಡಾ: ಮಹಿಳೆಯೊಬ್ಬಳು ಎಂಟು ವರ್ಷದ ಮಗುವನ್ನು ಲಿಫ್ಟ್ ನಿಂದ ಹೊರಗೆಳೆದು ಕ್ರೂರವಾಗಿ ಥಳಿಸಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.
ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಗೌರ್ ಸಿಟಿ 2 ರ 12 ನೇ ಅವೆನ್ಯೂದಲ್ಲಿ ಈ ಘಟನೆ ನಡೆದಿದೆ .
ಒಬ್ಬ ಹುಡುಗ ಲಿಫ್ಟ್ನಲ್ಲಿ ನಿಂತಿದ್ದಾಗ ಇದ್ದಕ್ಕಿದ್ದಂತೆ ಮಹಿಳೆ ತನ್ನ ಸಾಕು ನಾಯಿಯೊಂದಿಗೆ ಬಂದಳು. ನಾಯಿಗೆ ಹೆದರಿದ ಬಾಲಕ ಕೈಮುಗಿದು ನಾಯಿಯನ್ನುಒಳಗೆ ಬಿಡಬೇಡಿ ಎಂದು ಕೇಳಿಕೊಂಡಿದ್ದಾನೆ.
ಮಹಿಳೆ, ಹುಡುಗನ ಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಬದಲು, ಕೋಪಗೊಂಡು ಹುಡುಗನನ್ನು ಲಿಫ್ಟ್ ನಿಂದ ಹೊರಗೆಳೆದು ಕಪಾಳಮೋಕ್ಷ ಮಾಡಲು ಪ್ರಾರಂಭಿಸಿದಳು. ಮಹಿಳೆ ಮಗುವನ್ನು ನಿರ್ದಯವಾಗಿ ಥಳಿಸುತ್ತಿರುವುದು ಲಿಫ್ಟ್ ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮತ್ತೆ ಬಾಲಕ ಲಿಫ್ಟ್ ಪ್ರವೇಶಿಸಿ ಅಳುತ್ತಿರುವುದು ಕಂಡುಬಂದಿದೆ. ವರದಿಯ ಪ್ರಕಾರ, ಈ ಘಟನೆ ನಿವಾಸಿಗಳಲ್ಲಿ ಆಕ್ರೋಶವನ್ನು ಹುಟ್ಟುಹಾಕಿತು.
A woman enters inside the lift with a dog. The child gets scared after seeing the dog, The woman takes the child out of the lift starts slapping him for no reason, Noida UP
pic.twitter.com/Lcyx4Foqlj— Ghar Ke Kalesh (@gharkekalesh) February 19, 2025