ನವದೆಹಲಿ : ಇನ್ಸ್ಟಾಗ್ರಾಮ್ ರೀಲ್ಸ್ ಮಾಡಬೇಡ ಎಂದ ಪತಿಯನ್ನೇ ಪತ್ನಿ ಕೊಲೆ ಮಾಡಿದ ಘಟನೆ ಬಿಹಾರದ ಬೇಗುಸರಾಯ್ ನಲ್ಲಿ ನಡೆದಿದೆ.
ಮಹೇಶ್ವರ ಕುಮಾರ್ ರೈ ಆರು ವರ್ಷಗಳ ಹಿಂದೆ ರಾಣಿ ಕುಮಾರಿಯನ್ನು ಮದುವೆಯಾಗಿದ್ದು, ಐದು ವರ್ಷದ ಮಗನಿದ್ದಾನೆ.
ಬಿಹಾರದ ಬೆಗುಸರಾಯ್ನ ಫಫೌಟ್ ಗ್ರಾಮದಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಕೊಲ್ಕತ್ತಾದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ 25 ವರ್ಷದ ಯುವಕ ಇತ್ತೀಚೆಗೆ ಮನೆಗೆ ಮರಳಿದ್ದ. ಅವನ ಪತ್ನಿಗೆ ಇನ್ ಸ್ಟಾಗ್ರಾಂ ನಲ್ಲಿ ಸಿಕ್ಕಾಪಟ್ಟೆ ರೀಲ್ಸ್ ಮಾಡುವ ಹುಚ್ಚು ಇತ್ತು, ಈ ವಿಚಾರಕ್ಕೆ ಗಂಡ ಹೆಂಡತಿ ನಡುವೆ ವಾಗ್ವಾದ ನಡೆದಿದೆ. ಸಿಟ್ಟಿಗೆದ್ದ ಹೆಂಡತಿ ತನ್ನ ಗಂಡನನ್ನೇ ಹೊಡೆದು ಕೊಂದಿದ್ದಾಳೆ. ಮೃತರ ಸಂಬಂಧಿಕರು ಅತ್ತೆ ಮಾವ ಮತ್ತು ಅವರ ಪತ್ನಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆ ಪೂರ್ಣಗೊಂಡ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ 9,500 ಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಮಹಿಳೆ ತನ್ನ ಖಾತೆಯಲ್ಲಿ 500 ಕ್ಕೂ ಹೆಚ್ಚು ರೀಲ್ಸ್ ಗಳನ್ನು ಪೋಸ್ಟ್ ಮಾಡಿದ್ದಾರೆ.