![](https://kannadadunia.com/wp-content/uploads/2024/08/6f29085f-9a23-43ec-9423-29112b7259ce.jpg)
ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬದ್ಲಾಪುರ್ – ಅಂಬೇರ್ನಾಥ್ ರಸ್ತೆಯಲ್ಲಿ ನಡೆದಿದ್ದು, ಕಪ್ಪು ಬಣ್ಣದ ಎಸ್ಯುವಿನಲ್ಲಿ ಬಂದ ದುಷ್ಕರ್ಮಿಗಳು ಮೊದಲಿಗೆ ಟೊಯೋಟಾ ಫಾರ್ಚುನರ್ ಕಾರಿಗೆ ಹಿಂಬದಿಯಿಂದ ಗುದ್ದಿದ್ದಾರೆ. ಇದರಿಂದ ಉಂಟಾದ ದೊಡ್ಡ ಸದ್ದಿಗೆ ಸಾರ್ವಜನಿಕರ ಬೆಚ್ಚಿಬಿದ್ದು ಏನೆಂದು ನೋಡುವಷ್ಟರಲ್ಲಿ ಮತ್ತೆ ತಿರುಗಿಸಿಕೊಂಡು ಬಂದ ಎಸ್ಯುವಿ, ಫಾರ್ಚುನರ್ ಕಾರಿಗೆ ಎದುರಿನಿಂದ ಗುದ್ದಿದೆ.
ಏಕಾಏಕಿ ನಡೆದ ಈ ಘಟನೆಯಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದು, ಇದರ ಮಧ್ಯೆ ತಮ್ಮ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡ ಒಬ್ಬರು, ಸೋಶಿಯಲ್ ಮೀಡಿಯಾದಲ್ಲಿ ಇದನ್ನು ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವು ನೆಟ್ಟಿಗರು ಹಾಡಹಗಲೇ ಈ ಘಟನೆ ನಡೆದಿರುವುದು ಖಂಡನೀಯ ಎಂದಿದ್ದಾರಲ್ಲದೆ ದುಷ್ಕರ್ಮಿಗಳ ವಿರುದ್ಧ ಪೊಲೀಸರು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.