ಹಿಮಾಚಲ ಪ್ರದೇಶದ ಸೋಲನ್‌ನಲ್ಲಿ ವಾಹನವನ್ನು ರಿವರ್ಸ್ ಪಡೆಯುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ರಿವರ್ಸ್ ಬರ್ತಿದ್ದ ಕಾರು 30 ಮೀಟರ್ ಕಂದಕಕ್ಕೆ ಬಿದ್ದಿದೆ. ಘಟನೆಯಲ್ಲಿ ಚಾಲಕಿಗೆ ತೀವ್ರವಾದ ಗಾಯಗಳಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ. ಮಹಿಳೆ ಕಾರನ್ನು ಪಾರ್ಕ್ ಮಾಡಲು ಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಕಾರನ್ನು ಪಾರ್ಕ್ ಮಾಡಲು ಕಾರನ್ನು ರಿವರ್ಸ್ ತೆಗೆದುಕೊಳ್ತಿದ್ದಂತೆ ಕಾರು ಕೆಳಗೆ ಬಿದ್ದಿದೆ.
ವರದಿಗಳ ಪ್ರಕಾರ, ದೊಡ್ಡ ಶಬ್ದವನ್ನು ಕೇಳಿದ ಸ್ಥಳೀಯ ನಿವಾಸಿಗಳು ಕಾರಿನ ಕಡೆಗೆ ಓಡಿದ್ದಾರೆ. ಗಾಯಗೊಂಡ ಮಹಿಳೆಯನ್ನು ಸೋಲನ್‌ನ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆಕೆಯ ಕಾಲು ಮತ್ತು ಕೈಗೆ ತೀವ್ರ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಗುಡ್ಡಗಾಡು ಪ್ರದೇಶದಲ್ಲಿ ಸುರಕ್ಷಿತ ಚಾಲನೆ ಮಾಡುವಂತೆ ಜನರಿಗೆ ಜಾಗೃತಿ ಮೂಡಿಸಬೇಕು ಎಂಬ ಅಭಿಪ್ರಾಯ ಕೇಳಿ ಬಂದಿದೆ. ಏತನ್ಮಧ್ಯೆ, ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ ಸಂಚಾರಕ್ಕೆ ಅಡಚಣೆಯನ್ನುಂಟು ಮಾಡಿದೆ. 70ರಷ್ಟು ರಸ್ತೆಗಳು ಬಂದ್ ಆಗಿದ್ದು, 51 ನೀರು ಸರಬರಾಜು ಯೋಜನೆಗಳಿಗೆ ಅಡಚಣೆಯಾಗಿದೆ.