
ಉತ್ತರಪ್ರದೇಶದ ಗಾಜಿಯಾಬಾದ್ ನಲ್ಲಿ ಅಮಾನವೀಯ ಕೃತ್ಯವೊಂದು ಜರುಗಿದೆ. ಚಾಲಕ ರಸ್ತೆಯಲ್ಲಿ ಮಲಗಿದ್ದ ಬೀದಿನಾಯಿಯ ಮೇಲೆ ಕಾರ್ ಹರಿಸಿ ತಿರುಗಿಯೂ ಸಹ ನೋಡದೇ ಹೋಗಿದ್ದಾನೆ.
ಘಟನೆ ನಡೆದ ಜಾಗದಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವಂತೆ ನೀಲಿ ಬಣ್ಣದ ಕಾರನ್ನು ರಸ್ತೆಯ ಅಂಚಿನಲ್ಲಿ ತಿರುವು ತೆಗೆದುಕೊಳ್ಳಲಾಗುತ್ತಿರುತ್ತದೆ. ಈ ವೇಳೆ ಕಾರ್ ಚಾಲಕ ರಸ್ತೆಯಲ್ಲಿನ ವಿದ್ಯುತ್ ಕಂಬದ ಪಕ್ಕ ಮಲಗಿದ್ದ ನಾಯಿಯ ಮೇಲೆ ಕಾರ್ ಹರಿಸುತ್ತಾನೆ.
ತಕ್ಷಣ ನಾಯಿ ನೋವಿನಿಂದ ಕೂಗುತ್ತದೆ. ಆದರೆ ಚಾಲಕ ಮಾತ್ರ ಹಿಂತಿರುಗಿಯೂ ನೋಡದೆ ಸ್ಥಳದಿಂದ ಮುಂದೆ ಹೋಗುತ್ತಾನೆ. ಘಟನೆಯಿಂದ ನಾಯಿಗೆ ತೀವ್ರತರ ಗಾಯವಾಗಿದೆಯಾ ಅಥವಾ ಚೇತರಿಸಿಕೊಂಡಿದೆಯಾ ತಿಳಿದುಬಂದಿಲ್ಲ.
ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋ ವೈರಲ್ ಆಗಿದ್ದು ಚಾಲಕನ ಅಮಾನವೀಯ ನಡೆಗೆ ಆಕ್ರೋಶ ಕಂಡುಬಂದಿದೆ.