alex Certify ಕ್ಯಾಮೆರಾದಲ್ಲಿ ಸೆರೆಯಾಯ್ತು ಆಘಾತಕಾರಿ ದೃಶ್ಯ: ಕೊರೊನಾ ರೋಗಿ ಶವ ಸೇತುವೆಯಿಂದ ನದಿಗೆ ಎಸೆದ ಕುಟುಂಬದವರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾಮೆರಾದಲ್ಲಿ ಸೆರೆಯಾಯ್ತು ಆಘಾತಕಾರಿ ದೃಶ್ಯ: ಕೊರೊನಾ ರೋಗಿ ಶವ ಸೇತುವೆಯಿಂದ ನದಿಗೆ ಎಸೆದ ಕುಟುಂಬದವರು

ಬಲರಾಂಪುರ್: ಉತ್ತರಪ್ರದೇಶದಲ್ಲಿ ಕೋವಿಡ್ ನಿಂದ ಸಾವನ್ನಪ್ಪಿದ ವ್ಯಕ್ತಿಯ ಮೃತದೇಹವನ್ನು ನದಿಗೆ ಎಸೆಯುವ ಆಘಾತಕಾರಿ ವಿಡಿಯೋ ಬಯಲಾಗಿದೆ.

ಗಂಗಾ ನದಿ ತೀರದಲ್ಲಿ ಆಳವಿಲ್ಲದ ಸಮಾಧಿಗಳಲ್ಲಿ ಸಾವಿರಾರು ಮೃತದೇಹಗಳ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಕೆಲವು ಮೃತದೇಹಗಳನ್ನು ನದಿಗೆ ಎಸೆಯಲಾಗಿದೆ ಎಂದು ಕೆಲವು ವಾರಗಳ ಹಿಂದೆ ವಿಶ್ವದಾದ್ಯಂತ ಸುದ್ದಿಯಾಗಿತ್ತು. ನದಿಗಳಲ್ಲಿ ಮೃತದೇಹಗಳನ್ನು ಎಸೆಯದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಉತ್ತರದ ಅನೇಕ ರಾಜ್ಯಗಳಿಗೆ ಆದೇಶಿಸಿದೆ. ಇಂತಹ ಘಟನೆ ಮರುಕಳಿಸದಂತೆ ನದಿ ತೀರಗಳಲ್ಲಿ ಗಸ್ತು ಹೆಚ್ಚಿಸುವಂತೆ ಕೇಂದ್ರದಿಂದ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ.

ಬಡತನ ಮತ್ತು ಅರಿವಿನ ಕೊರತೆಯಿಂದಾಗಿ ಅನೇಕರು ನದಿಗೆ ಮೃತದೇಹಗಳನ್ನು ಎಸೆಯುತ್ತಿದ್ದಾರೆ. ಮೇ 28 ರಂದು ಬಲರಾಂಪುರ್ ಜಿಲ್ಲೆಯಲ್ಲಿ ಪಿಪಿಇ ಸೂಟ್ ನಲ್ಲಿದ್ದ ವ್ಯಕ್ತಿ ಸೇತುವೆ ಮೇಲಿಂದ ರಾಪ್ತಿ ನದಿಗೆ ಮೃತದೇಹವನ್ನು ಎಸೆಯುತ್ತಿರುವ ದೃಶ್ಯಗಳನ್ನು ಇದೇ ಮಾರ್ಗವಾಗಿ ಸಂಚರಿಸುತ್ತಿದ್ದವರು ಚಿತ್ರೀಕರಿಸಿಕೊಂಡಿದ್ದಾರೆ.

ಇಬ್ಬರು ಪುರುಷರು ಮೃತದೇಹವನ್ನು ಎಸೆಯುತ್ತಿದ್ದು, ಅವರಲ್ಲಿ ಒಬ್ಬರು ಪಿಪಿಇ ಕಿಟ್ ಧರಿಸಿರುವುದು ಕಂಡುಬಂದಿದೆ. ಬಲರಾಮ್ಪುರ ಮುಖ್ಯ ವೈದ್ಯಾಧಿಕಾರಿ ಅದು, ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಯ ಮೃತದೇಹ ಎಂದು ದೃಢಪಡಿಸಿದ್ದಾರೆ.

ಮೃತರ ಸಂಬಂಧಿಕರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಶವವನ್ನು ನದಿಯಿಂದ ತೆಗೆದು ಅವರಿಗೆ ಹಸ್ತಾಂತರಿಸಲಾಗಿದೆ. ಮೇ 25 ರಂದು ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೂರು ದಿನಗಳ ನಂತರ ಆತ ಮೃತಪಟ್ಟಿದ್ದ. ಕೋವಿಡ್ ಪ್ರೋಟೋಕಾಲ್ ಪ್ರಕಾರ ಮೃತದೇಹನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿತ್ತು. ಅವರು ನಿಗದಿತ ಸ್ಥಳದಲ್ಲಿ ಅಂತ್ಯಕ್ರಿಯೆ ನೆರವೇರಿಸದೇ ಮೃತದೇಹವನ್ನು ನದಿಗೆ ಎಸೆದಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಬಲರಾಮ್ ಪುರ ಮುಖ್ಯ ವೈದ್ಯಾಧಿಕಾರಿ ವಿ.ಬಿ. ಸಿಂಗ್ ತಿಳಿಸಿದ್ದಾರೆ.

ಬಿಹಾರ ಮತ್ತು ಉತ್ತರ ಪ್ರದೇಶದ ಕೆಲವು ಭಾಗದಲ್ಲಿ ಮೇ ತಿಂಗಳ ಆರಂಭದಲ್ಲಿ ಗಂಗಾನದಿಯಲ್ಲಿ ನೂರಾರು ಶವಗಳು ತೇಲಿಬಂದಿದ್ದವು. ಬಕ್ಸಾರ್ ಜಿಲ್ಲೆಯಲ್ಲಿ 71 ಶವಗಳನ್ನು ಗಂಗಾ ನದಿಯಿಂದ ಶಪಡಿಸಿಕೊಂಡು ಅಂತ್ಯಸಂಸ್ಕಾರ ಮಾಡಲಾಗಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...