ಗಾಝಾ ನಗರದ ಎರಡು ಶಾಲೆಗಳ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 25 ಫೆಲೆಸ್ತೀನೀಯರು ಸಾವನ್ನಪ್ಪಿದ್ದಾರೆ, ಅವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು ಗಾಝಾ ಸಿವಿಲ್ ಡಿಫೆನ್ಸ್ ತಿಳಿಸಿದೆ.
ಸ್ಥಳಾಂತರಗೊಂಡ ಕುಟುಂಬಗಳಿಗೆ ಆಶ್ರಯ ನೀಡಿರುವ ಹಸನ್ ಸಲಾಮಾ ಮತ್ತು ಅಲ್-ನಾಸೆರ್ ಶಾಲೆಗಳ ಮೇಲೆ ನಡೆದ ದಾಳಿಯಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಫೆಲೆಸ್ತೀನ್ ಅಧಿಕೃತ ಸುದ್ದಿ ಸಂಸ್ಥೆ ವಾಫಾ ಮತ್ತು ಹಮಾಸ್ ಮಾಧ್ಯಮಗಳು ವರದಿ ಮಾಡಿವೆ.
ಉಗ್ರರು ಈ ತಾಣಗಳನ್ನು ಬಳಸುತ್ತಿದ್ದಾರೆ ಎಂದು ಹೇಳಿದರೂ ಇಸ್ರೇಲ್ ಸೇನೆ ದಾಳಿಯನ್ನು ದೃಢಪಡಿಸಿದೆ.”ಈ ಶಾಲೆಗಳನ್ನು ಹಮಾಸ್ನ ಅಲ್-ಫುರ್ಕಾನ್ ಬೆಟಾಲಿಯನ್ ತನ್ನ ಭಯೋತ್ಪಾದಕ ಕಾರ್ಯಕರ್ತರಿಗೆ ಅಡಗಿರುವ ಸ್ಥಳವಾಗಿ ಮತ್ತು ಕಮಾಂಡ್ ಕೇಂದ್ರಗಳಾಗಿ ಬಳಸಿದೆ” ಎಂದು ಮಿಲಿಟರಿ ಹೇಳಿಕೆಯಲ್ಲಿ ತಿಳಿಸಿದೆ.
ಗಾಝಾ: ಗಾಝಾದ ಆಸ್ಪತ್ರೆ ಕಾಂಪೌಂಡ್ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಐವರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಅಲ್-ಅಕ್ಸಾ ಆಸ್ಪತ್ರೆಯ ಕಾಂಪ್ ಒಳಗೆ ಸ್ಥಳಾಂತರಗೊಂಡ ಪ್ಯಾಲೆಸ್ಟೀನಿಯರ ಟೆಂಟ್ ಪ್ರದೇಶದ ಮೇಲೆ ವೈಮಾನಿಕ ದಾಳಿ ನಡೆದಿದೆ ಎಂದು ಅವರು ಹೇಳಿದರು.