
ಘಟನೆಯ ವೀಡಿಯೊದಲ್ಲಿ ಯುವತಿ ಐದನೇ ಮಹಡಿಯ ಕಟ್ಟಡದ ತುದಿಯಲ್ಲಿ ನಿಂತಿರುವುದನ್ನು ಕಾಣಬಹುದು, ನಿವಾಸಿಗಳು ಆಕೆಯನ್ನು ತಡೆಯಲು ಮುಂದಾಗಿದ್ದರೂ ಪ್ರಯೋಜನವಾಗದೇ ಕೆಲವು ಸೆಕೆಂಡುಗಳ ನಂತರ ಯುವತಿ ಜಿಗಿದು ಕೆಳಕ್ಕೆ ಬಿದ್ದಳು.
ವರದಿಗಳ ಪ್ರಕಾರ ಚಿಕ್ಕಡಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ಆರ್‌ಟಿಸಿ ಕ್ರಾಸ್ ರಸ್ತೆ ಬಳಿಯ ಗಿರಿ ಶಿಖರ್ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ.
ಯುವತಿ ಸನಾ ಬೇಗಂ ಅಪಾರ್ಟ್‌ಮೆಂಟ್ ಕಟ್ಟಡವನ್ನು ಪ್ರವೇಶಿಸಿ ಐದನೇ ಮಹಡಿಯಲ್ಲಿರುವ ಟೆರೇಸ್‌ಗೆ ತೆರಳಿದರು. ತನ್ನ ಫೋನ್‌ನಲ್ಲಿ ಮಾತನಾಡುತ್ತಿದ್ದಾಗಲೇ ಮಾರಣಾಂತಿಕವಾಗಿ ಜಿಗಿದಿದ್ದಾರೆ ಎಂದು ಪ್ರಾಥಮಿಕ ವರದಿಗಳು ಸೂಚಿಸುತ್ತವೆ. ಘಟನೆಯಲ್ಲಿ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಈ ಘಟನೆಯನ್ನು ಕಂಡ ಸ್ಥಳೀಯರು ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಘಟನೆಯ ಕುರಿತು ಸಾಕ್ಷ್ಯ ಮತ್ತು ವಿವರಗಳನ್ನು ಸಂಗ್ರಹಿಸಲು ಪೊಲೀಸರು, ವಿಧಿವಿಜ್ಞಾನ ತಜ್ಞರು, ಸ್ಥಳಕ್ಕೆ ಆಗಮಿಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಆಕೆಯ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ, ಆದರೆ ಚಿಕ್ಕದಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾರಣಗಳನ್ನು ಕಂಡುಹಿಡಿಯಲು ತನಿಖೆಯನ್ನು ಪ್ರಾರಂಭಿಸಿದ್ದಾರೆ.