
ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ವಿಮಾನವು ತುರ್ತು ಲ್ಯಾಂಡಿಂಗ್ ಆದ ಬಳಿಕ ರನ್ವೇನಲ್ಲಿ ಸ್ಕಿಡ್ ಆಗಿರುವುದನ್ನು ಕಾಣಬಹುದಾಗಿದೆ.
ರನ್ವೇನಲ್ಲಿ ಸ್ಕಿಡ್ ಆದ ವಿಮಾನವು ರನ್ವೇನಿಂದ ಹುಲ್ಲುಗಾವಲು ಪ್ರದೇಶವನ್ನು ಪ್ರವೇಶಿಸಿ ಎರಡು ಭಾಗಗಳಾಗಿ ವಿಭಜನೆಯಾಯಿತು ಎಂದು ವಾಯುಯಾನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪೈಲಟ್ ಹಾಗೂ ಸಹ ಪೈಲಟ್ನ್ನು ಸ್ಥಳಾಂತರಿಸಲಾಗಿದೆ ಎಂದು ವಿಮಾನ ನಿಲ್ದಾಣದ ನಿರ್ವಾಹಕ ಏರಿಸ್ ಮಾಹಿತಿ ನೀಡಿದ್ದಾರೆ.
ಈ ಘಟನೆಯ ವಿವಿಧ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸುತ್ತುತ್ತಿದ್ದು ಹಳದಿ ಬಣ್ಣದ ವಿಮಾನವು ತುಂಡಾದ ಬಳಿಕ ಮುರಿದ ರೆಕ್ಕೆಯೊಂದಿಗೆ ಹುಲ್ಲಿನ ಹಾಸನ್ನು ಪ್ರವೇಶಿಸಿದೆ. ಅಗ್ನಿಶಾಮಕ ದಳ ಇಲಾಖೆಯು ನೀಡಿರುವ ಮಾಹಿತಿಯ ಪ್ರಕಾರ ಈ ಘಟನೆಯಿಂದ ಯಾರಿಗೂ ಯಾವುದೇ ಹಾನಿಯಾಗಿಲ್ಲ. ಓರ್ವ ಸಿಬ್ಬಂದಿಗೆ ಮುನ್ನೆಚ್ಚರಿಕಾ ಕ್ರಮವಾಗಿ ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದೆ ಎನ್ನಲಾಗಿದೆ.