
ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ನ ಮಿಯೋಂಗಿಲ್-ಡಾಂಗ್ ಜಿಲ್ಲೆಯಲ್ಲಿ ಸೋಮವಾರ ಸಂಜೆ ನಡೆದ ಭೀಕರ ದುರಂತವೊಂದರಲ್ಲಿ ರಸ್ತೆಯೊಂದು ಇದ್ದಕ್ಕಿದ್ದಂತೆ ಕುಸಿದ ಪರಿಣಾಮ 30 ವರ್ಷದ ಬೈಕ್ ಸವಾರನೊಬ್ಬ ಸಾವನ್ನಪ್ಪಿದ್ದಾನೆ. ಈ ಘಟನೆಯಲ್ಲಿ ವ್ಯಾನ್ ಒಂದು ಗಾಳಿಯಲ್ಲಿ ತೇಲಾಡಿದ ದೃಶ್ಯಗಳು ಸ್ಥಳೀಯರಲ್ಲಿ ಆತಂಕ ಮೂಡಿಸಿವೆ.
ಮಿಯೋಂಗಿಲ್-ಡಾಂಗ್ ವೃತ್ತದ ಸಮೀಪ ರಸ್ತೆ ಕುಸಿದು ಸುಮಾರು 65 ಮೀಟರ್ ಆಳದ ಹೊಂಡ ಸೃಷ್ಟಿಯಾಗಿದೆ. ಈ ದುರಂತದಲ್ಲಿ ಬೈಕ್ ಸವಾರ ಹೊಂಡಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ. ಅದೇ ವೇಳೆ, ವ್ಯಾನ್ ಚಾಲಕಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಸ್ತೆ ಕುಸಿತದಿಂದಾಗಿ ವ್ಯಾನ್ ಮೇಲಕ್ಕೆ ಚಿಮ್ಮಿ ಉಲ್ಟಾ ಆಗುವ ಸ್ಥಿತಿಗೆ ತಲುಪಿತ್ತು. ಆದರೆ, ಚಾಲಕಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಕ್ಷಣಾ ಸಿಬ್ಬಂದಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಬೈಕ್ ಸವಾರನ ಮೃತದೇಹವನ್ನು ಹೊಂಡದಿಂದ ಹೊರತೆಗೆದಿದ್ದಾರೆ. ಘಟನಾ ಸ್ಥಳದಲ್ಲಿ ಬೈಕ್, ಹೆಲ್ಮೆಟ್, ಬೂಟುಗಳು ಮತ್ತು ಮೊಬೈಲ್ ಫೋನ್ ಸೇರಿದಂತೆ ಸಂತ್ರಸ್ತನ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಗಾಯಗೊಂಡ ವ್ಯಾನ್ ಚಾಲಕಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಈ ಘಟನೆ ಸಂಪೂರ್ಣವಾಗಿ ಅನಿರೀಕ್ಷಿತವಾಗಿ ನಡೆದಿದ್ದು, ಬೈಕ್ ಸವಾರನಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ರಸ್ತೆ ಕುಸಿತದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ಈ ದುರಂತ ಸಿಯೋಲ್ ನಗರದಲ್ಲಿ ಆತಂಕ ಮತ್ತು ಚರ್ಚೆಗೆ ಕಾರಣವಾಗಿದೆ. ಮೂಲಸೌಕರ್ಯದ ಸುರಕ್ಷತೆಯ ಬಗ್ಗೆ ಸ್ಥಳೀಯರು ಪ್ರಶ್ನೆ ಎತ್ತಿದ್ದು, ತನಿಖೆಗೆ ಒತ್ತಾಯಿಸಿದ್ದಾರೆ.
ಪ್ರಾಥಮಿಕ ತನಿಖೆಯು ರಸ್ತೆಯ ಗುಣಮಟ್ಟ ಮತ್ತು ಭೂಗತ ಕಾಮಗಾರಿಗಳ ಸಂಬಂಧವನ್ನು ಪರಿಶೀಲಿಸುತ್ತಿದೆ. ಸ್ಥಳೀಯ ಆಡಳಿತವು ಘಟನೆಯ ಬಗ್ಗೆ ಸಂಪೂರ್ಣ ವರದಿಗಾಗಿ ಕಾಯುತ್ತಿದ್ದು, ಭವಿಷ್ಯದಲ್ಲಿ ಇಂತಹ ದುರಂತಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವ ಭರವಸೆ ನೀಡಿದೆ.
NEW: Motorcyclist who vanished into a sinkhole on Monday, found deceased after an 18-hour search.
The man was seen riding his motorcycle on a road in Seoul, South Korea when a 65 feet wide and 65 feet deep sinkhole opened up.
The motorcyclist was identified by officials as… pic.twitter.com/K0uE8PKHLR
— Collin Rugg (@CollinRugg) March 25, 2025