ಕೊಲ್ಕತ್ತಾದಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯ ವಿರುದ್ಧ ತೀವ್ರ ಪ್ರತಿಭಟನೆಯ ಮಧ್ಯೆ, ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ 20 ವರ್ಷದ ನರ್ಸಿಂಗ್ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆದಿದೆ. ಸದ್ಯ ಸಂತ್ರಸ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಹಾರಾಷ್ಟ್ರದ ರತ್ನಗಿರಿಯಲ್ಲಿ 19 ವರ್ಷದ ನರ್ಸಿಂಗ್ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆದಿದೆ. ಸಂತ್ರಸ್ತೆ ಮನೆಗೆ ಹೋಗಲು ಆಟೋವನ್ನು ತೆಗೆದುಕೊಂಡಿದ್ದಳು, ಆದರೆ ಆಟೋ ಚಾಲಕ ಸಂತ್ರಸ್ತೆಗೆ ನೀರು ನೀಡುವ ನೆಪದಲ್ಲಿ ನೀರಿನಲ್ಲಿ ಏನನ್ನೋ ಬೆರೆಸಿದ್ದಾನೆ. ಆಟೋ ಚಾಲಕ ಆಕೆಗೆ ನಿದ್ರಾಜನಕ ನೀಡಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ. ಮನೆಗೆ ತಲುಪಲು ಆಟೋ ರಿಕ್ಷಾ ಹತ್ತುವಾಗ ಈ ಘಟನೆ ನಡೆದಿದೆ. ಆಟೋ ಚಲಿಸಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನರ್ಸಿಂಗ್ ವಿದ್ಯಾರ್ಥಿನಿ ಕಾಲೇಜಿನಿಂದ ಆಟೋರಿಕ್ಷಾದಲ್ಲಿ ಹಿಂದಿರುಗುತ್ತಿದ್ದಾಗ ಚಾಲಕ ಆಕೆಗೆ ನಿದ್ರಾಜನಕ ಬೆರೆಸಿದ ನೀರನ್ನು ನೀಡಿದ್ದಾನೆ. ಆಕೆ ಪ್ರಜ್ಞೆ ಕಳೆದುಕೊಂಡ ನಂತರ ಆ ವ್ಯಕ್ತಿ ಅವಳನ್ನು ಏಕಾಂತ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ವರದಿ ತಿಳಿಸಿದೆ. ಪ್ರಜ್ಞೆ ಬಂದ ಬಳಿಕ ಕುಟುಂಬದವರಿಗೆ ಆಕೆ ವಿಷಯ ತಲುಪಿಸಿದ್ದಾಳೆ.ಪೊಲೀಸರು ಆಟೋ ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ.ಕೋಲ್ಕತ್ತಾದ ಆರ್ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯ ಬಗ್ಗೆ ರಾಷ್ಟ್ರೀಯ ಆಕ್ರೋಶದ ನಡುವೆ ಈ ಘಟನೆ ನಡೆದಿದೆ.