ಬೆಂಗಳೂರು : ದಕ್ಷಿಣ ಬೆಂಗಳೂರಿನ ಚಂದಾಪುರದಲ್ಲಿರುವ ಫ್ಲ್ಯಾಟ್ ನಲ್ಲಿ ಅಪರಿಚಿತ ಯುವತಿಯ ನಗ್ನ ದೇಹ ಪತ್ತೆಯಾಗಿದೆ.
ವರದಿಗಳ ಪ್ರಕಾರ, ನಿವಾಸಿಗಳಿಗೆ ಮೃತದೇಹದ ವಾಸನೆ ಬಂದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದರು. ನಂತರ, ಪೊಲೀಸರು ಬಾಗಿಲುಗಳನ್ನು ಒಡೆದು ನೋಡಿದಾಗ ಕೆಲವು ಮಾದಕವಸ್ತುಗಳು ಮತ್ತು ಸಿರಿಂಜ್ ನೊಂದಿಗೆ ಫ್ಲ್ಯಾಟ್ನಲ್ಲಿ ಶವ ಬಿದ್ದಿರುವುದು ಕಂಡುಬಂದಿದೆ. ಮೃತ ಯುವತಿ ಮೂಲತಃ ಪಶ್ಚಿಮ ಬಂಗಾಳದವರಾಗಿದ್ದಾರೆ ಎನ್ನಲಾಗಿದೆ.
ಅದೇ ಕಟ್ಟಡದ ನೆಲಮಹಡಿಯಲ್ಲಿ ವಾಸಿಸುವ ಕಟ್ಟಡದ ಮಾಲೀಕ ಸಂಗೀತ್ ಗುಪ್ತಾ, ಒಡಿಶಾ ಮೂಲದ ಸಫಾನ್ ಕುಮಾರ್ ಎಂಬ ವ್ಯಕ್ತಿಗೆ ಸಿಂಗಲ್ ಬೆಡ್ ರೂಮ್ ಫ್ಲ್ಯಾಟ್ ಅನ್ನು ಬಾಡಿಗೆಗೆ ನೀಡಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾರೆ. 25 ವರ್ಷದೊಳಗಿನ ಯುವತಿ ಶವ ಪತ್ತೆಯಾಗಿದ್ದು, ಇದು ಆತ್ಮಹತ್ಯೆಯೋ..? ಕೊಲೆಯೋ ತಿಳಿದು ಬಂದಿಲ್ಲ.
ಮೃತ ದೇಹದ ಪಕ್ಕದಲ್ಲಿ ಬಿಳಿ ಪುಡಿ ಮತ್ತು ಸಿರಿಂಜ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದು. ಪ್ರಕರಣ ದಾಖಲಿಸಿದ ನಂತರ ಶವವನ್ನು ಶವಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಸಫಾನ್ ಮತ್ತು ಬಾಡಿಗೆದಾರಳನ್ನು ಪರಿಚಯಿಸಿದ ಏಜೆಂಟರ ಫೋನ್ ಗಳು ಸ್ವಿಚ್ ಆಫ್ ಆಗಿವೆ.