ಪತಿಯೋರ್ವ ವಾಟ್ಸಾಪ್ ಗ್ರೂಪ್ ನೋಡಿ ಪತ್ನಿಗೆ ಹೆರಿಗೆ ಮಾಡಿಸಿದ ಶಾಕಿಂಗ್ ಘಟನೆ ಚೆನ್ನೈನಲ್ಲಿ ನಡೆದಿದೆ.
ಪತಿ ಮನೋಹರ್ ಹಾಗೂ ಪತ್ನಿ ಸುಕನ್ಯಾ ದಂಪತಿಗಳಿರುವ ವಾಟ್ಸಾಪ್ ಗ್ರೂಪ್ ನಲ್ಲಿ ಗ್ರೂಪ್ ನ ಸದಸ್ಯರು ಆಗಾಗ್ಗೆ ಹೆರಿಗೆ ವಿಡಿಯೋಗಳನ್ನ ಪೋಸ್ಟ್ ಮಾಡುತ್ತಿದ್ದರು. ಸುಕನ್ಯಾ ಗರ್ಭಿಣಿಯಾದ ಬಳಿಕ ಮನೋಹರ್ ವೈದ್ಯರ ಯಾವುದೇ ಸಲಹೆ ಸೂಚನೆ ಪಡೆಯದೇ ಹೆರಿಗೆ ಮಾಡಿಸಿದ್ದಾರೆ. ವಾಟ್ಸಾಪ್ ಗ್ರೂಪ್ ನಲ್ಲಿ ಬರುತ್ತಿದ್ದ ವಿಡಿಯೋ ಗಮನಿಸಿ ತಾವೇ ಸ್ವತಹ ಹೆರಿಗೆ ಮಾಡಿ ಮನೋಹರ್ ಯಶಸ್ವಿಯಾಗಿದ್ದಾರೆ.
ವರದಿ ಪ್ರಕಾರ 36 ವರ್ಷದ ಮನೋಹರನ್ ಅವರು 32 ವರ್ಷದ ಪತ್ನಿ ಸುಕನ್ಯಾ ಅವರಿಗೆ ಹೆರಿಗೆ ಮಾಡಿಸಿದ್ದಾರೆ. ವಾಟ್ಸಾಪ್ ಗ್ರೂಪ್ ನಲ್ಲಿ ಬಂದ ಹೆರಿಗೆಯ ವಿಡಿಯೋ ನೋಡಿಕೊಂಡು ಸ್ವತಹ ಹೆರಿಗೆ ಮಾಡಿಸಿದ್ದಾರೆ.ಅದೃಷ್ಟವಶಾತ್ ತಾಯಿ ಮಗು ಆರೋಗ್ಯವಾಗಿದ್ದು, ಹೆರಿಗೆಯ ನಂತರ ಮಗುವಿನ ಫೋಟೋ ಹಂಚಿಕೊಂಡಿದ್ದಾರೆ.
ದಂಪತಿಗಳು ತಮ್ಮ ಮೂರನೇ ಮಗುವನ್ನು ಹೆರಲು ಈ ಆನ್ಲೈನ್ ಮೊರೆ ಹೋಗಿದ್ದಾರೆ. ಅವರಿಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದಾರೆ, ಅವರಲ್ಲಿ ಒಬ್ಬರಿಗೆ ಎಂಟು ಮತ್ತು ಇನ್ನೊಬ್ಬರಿಗೆ ನಾಲ್ಕು ವರ್ಷ. ಸುಕನ್ಯಾ ಮೂರನೇ ಮಗುವಿಗೆ ಗರ್ಭಿಣಿಯಾದಾಗ, ದಂಪತಿಗಳು ವೈದ್ಯಕೀಯ ತಪಾಸಣೆಯನ್ನು ತಪ್ಪಿಸಲು ನಿರ್ಧರಿಸಿದ್ದಾರೆ. ದಂಪತಿಗಳು ಆಸ್ಪತ್ರೆಗೆ ಹೋಗುವ ಬದಲು ವಾಟ್ಸಾಪ್ ಗುಂಪಿನಿಂದ ಸೂಚನೆಗಳು ಮತ್ತು ಸಲಹೆಗಳನ್ನು ತೆಗೆದುಕೊಳ್ಳಲು ನಿರ್ಧರಿಸಿದರು.