ಮಿಸೌರಿ : ತರಗತಿಯಲ್ಲೇ ವಿದ್ಯಾರ್ಥಿ ಜೊತೆ ಕಾಮುಕ ಶಿಕ್ಷಕಿಯೋರ್ವಳು ರಾಸಲೀಲೆಯಾಡಿದ್ದು, ಹೊರಗೆ ಕಾವಲಿಗೆ ಮಕ್ಕಳನ್ನು ಬಳಸಿಕೊಂಡ ಶಾಕಿಂಗ್ ಘಟನೆ ಅಮೆರಿಕದಲ್ಲಿ ನಡೆದಿದೆ.
ಶಾಲಾ ತರಗತಿಯಲ್ಲಿ ಹದಿಹರೆಯದವರೊಂದಿಗೆ ಲೈಂಗಿಕ ಕ್ರಿಯೆ ನಡೆಸಿ ಕಿರುಕುಳ ನೀಡಿದ ಆರೋಪದ ಮೇಲೆ ಅಮೆರಿಕದ ಮಿಸ್ಸೌರಿಯಲ್ಲಿ ಪ್ರೌಢಶಾಲಾ ಶಿಕ್ಷಕಿಯನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ. ಶಾಲೆಯಲ್ಲಿ ಶಿಕ್ಷಕಿ ರಾಸಲೀಲೆ ಆಡುತ್ತಿದ್ದರೆ, ಶಾಲೆಯ ಇತರ ವಿದ್ಯಾರ್ಥಿಗಳು ಕೊಠಡಿ ಹೊರಗೆ ನಿಂತು ಯಾರಾದ್ರೂ ಬರುತ್ತಿದ್ದಾರಾ ಎಂದು ಕಾವಲು ಕಾಯುವ ಕೆಲಸವನ್ನೂ ಮಾಡುತ್ತಿದ್ದರು.
ತಾನು ಪಾಠ ಮಾಡುವ ತರಗತಿಯ ವಿದ್ಯಾರ್ಥಿ ಜೊತೆ ಲೈಂಗಿಕ ಸಂಪರ್ಕ ಹೊಂದಿದ್ದಳು. ಕಳೆದ ಜನವರಿ 5 ರಂದೇ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪುಲಾಸ್ಕಿ ಕೌಂಟಿಯ ಲ್ಯಾಕ್ವಿ ಹೈಸ್ಕೂಲ್ ನ ಗಣಿತ ಶಿಕ್ಷಕಿ ಹೇಲಿ ಕ್ಲಿಫ್ಟನ್-ಕಾರ್ಮಾಕ್ ಅವರನ್ನು ಬಂಧಿಸಲಾಗಿದೆ. ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಪರ್ಕ ಮತ್ತು ಮಕ್ಕಳ ಮೇಲಿನ ಲೈಂಗಿಕ ಕಿರುಕುಳದ ಆರೋಪದ ಮೇಲೆ ಜನವರಿ 5 ರಂದು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ. 16 ವರ್ಷದ ವಿದ್ಯಾರ್ಥಿಯೋರ್ವ ತನ್ನ ಬೆನ್ನಿನ ಮೇಲಿನ ಮೂಡಿದ ಗೀರುಗಳನ್ನು ಪೊಲೀಸರಿಗೆ ತೋರಿಸಿದ್ದಾನೆ . ಈಕೆ 16 ವರ್ಷದ ಸಂತ್ರಸ್ತ ಬಾಲಕ ಮಾತ್ರವಲ್ಲ, ಶಾಲೆಯ ಎಲ್ಲಾ ಬಾಲಕರ ಜೊತೆಗೂ ಆಕೆ ಕೆಟ್ಟದಾಗಿ ವರ್ತಿಸುತ್ತಿದ್ದಳು ಎಂದು ಶಾಲೆಯ ವಿದ್ಯಾರ್ಥಿಗಳು ಪೊಲೀಸರ ವಿಚಾರಣೆ ವೇಳೆ ಹೇಳಿದ್ದಾರೆ.