ರಾಜಸ್ಥಾನ : ಜೈಪುರದಲ್ಲಿ ಸಿಎನ್’ಜಿ ಗ್ಯಾಸ್ ತುಂಬಿದ್ದ ಟ್ಯಾಂಕರ್ ಸ್ಪೋಟಗೊಂಡು 8 ಮಂದಿ ಸಜೀವ ದಹನರಾಗಿದ್ದು, ಘಟನೆಯ ಭಯಾನಕ ವಿಡಿಯೋ ವೈರಲ್ ಆಗಿದೆ.
ರಾಜಸ್ಥಾನದ ಜೈಪುರದ ಅಜ್ಮೀರ್ ರಸ್ತೆಯ ಪೆಟ್ರೋಲ್ ಪಂಪ್ ಬಳಿ ಶುಕ್ರವಾರ ಬೆಳಿಗ್ಗೆ ಎಲ್ಪಿಜಿ (ದ್ರವೀಕೃತ ಪೆಟ್ರೋಲಿಯಂ ಅನಿಲ) ಮತ್ತು ಸಿಎನ್ಜಿ (CNG) ಟ್ರಕ್ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 8 ಜನರು ಸಾವನ್ನಪ್ಪಿದ್ದಾರೆ ಮತ್ತು 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಮಾಹಿತಿಯ ಪ್ರಕಾರ, ಟ್ರಕ್ ವಾಹನಗಳಿಗೆ ಡಿಕ್ಕಿ ಹೊಡೆದ ನಂತರ ಹಲವಾರು ವಾಹನಗಳು ಬೆಂಕಿಗೆ ಆಹುತಿಯಾಗಿದೆ. .ಘಟನೆಯಲ್ಲಿ 40 ಕ್ಕೂ ಹೆಚ್ಚು ವಾಹನಗಳು ಸುಟ್ಟು ಭಸ್ಮವಾಗಿದೆ. ಘಟನೆಯ ಭಯಾನಕ ವಿಡಿಯೋ ವೈರಲ್ ಆಗಿದೆ.
जयपुर के भांकरोटा इलाके में टैंकर में ब्लास्ट का हादसा भयावह है. सूचना मिल रही है कि करीब 20-30 लोग बुरी तरह झुलसे हैं. वहीं पास में एक पाइप फैक्ट्री जलकर पूरी राख हो गई.#JaipurNews pic.twitter.com/RPvczsFt62
— Avdhesh Pareek (@Zinda_Avdhesh) December 20, 2024