ಬೆಂಗಳೂರು : ಸ್ಕೂಟಿ ಕೀ ಕೊಟ್ಟಿಲ್ಲ ಎಂದು ಪಾಪಿ ಮಗನೋರ್ವ ಚಿಕ್ಕಮ್ಮನನ್ನೇ ಕೊಂದ ಭೀಕರ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಮಂಗಳ ಸಾವರ್ಡ್ಕರ್ ಎಂದು ಗುರುತಿಸಲಾಗಿದೆ. ಆರೋಪಿ ಸಂಜಯ್ ಸವಾಡ್ಕರ್ ಚಿಕ್ಕಮ್ಮನ ಬಳಿ ಸ್ಕೂಟಿ ಕಿ ಕೇಳಿದ್ದಾನೆ, ಆದರೆ ಚಿಕ್ಕಮ್ಮ ಕೊಡಲ್ಲ ಎಂದು ಹೇಳಿದ್ದಾರೆ. ಇಷ್ಟಕ್ಕೇ ಸಿಟ್ಟಾದ . ಆರೋಪಿ ಸಂಜಯ್ ಚಿಕ್ಕಮ್ಮನ ಜೊತೆ ಜಗಳ ತೆಗೆದು ಅಲ್ಲೇ ಇದ್ದ ರಾಡ್ ನಿಂದ ಚಿಕ್ಕಮನ ತಲೆಗೆ ಬಲವಾಗಿ ಹೊಡೆದಿದ್ದಾನೆ. ಪರಿಣಾಮ ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ.
ಟಿಪ್ಪರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಸಂಜಯ್ ಈ ಕೃತ್ಯ ಎಸಗಿದ್ದು, ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.