ಬೆಳಗಾವಿ : ರಾಜ್ಯದಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ಮಗಳ ಮೇಲೆ ಎರಗಲು ಯತ್ನಿಸಿದ ಪತಿಯನ್ನೇ ಪತ್ನಿ ಕೊಂದು 2 ತುಂಡುಗಳಾಗಿ ಕತ್ತರಿಸಿದ್ದಾಳೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ಘಟನೆ ನಡೆದಿದೆ. ಕೊಲೆಯಾದನನ್ನು ಶ್ರೀಮಂತ ಇಟ್ನಾಳ್ ಎಂದು ಗುರುತಿಸಲಾಗಿದೆ. ಪತ್ನಿ ಸಾವಿತ್ರಿ ಕೊಲೆ ಮಾಡಿದ ಮಹಿಳೆ.ಶ್ರೀಮಂತ ಇಟ್ನಾಳ, ಪುತ್ರಿಯ ಮೇಲೆ ರಾಕ್ಷನಂತೆ ಎಗರಿದ್ದ. ಇದರಿಂದ ಬೇರೆ ದಾರಿ ಕಾಣದೇ ಪಾಪಿ ಪತಿಯನ್ನು ಕಲ್ಲು ಎತ್ತಿಹಾಕಿ ಸಾವಿತ್ರಿ ಬರ್ಬರವಾಗಿ ಹತ್ಯೆ ಮಾಡಿದ್ದಾಳೆ. ಬಳಿಕ ಶವವನ್ನು ಬಾವಿಗೆ ಎಸೆದಿದ್ದಾಳೆ.
ಸರಸಕ್ಕೆ ಪತ್ನಿ ಬಾರದೇ ಇದ್ದಾಗ ಶ್ರೀಮಂತ ಇಟ್ನಾಳ್ ತನ್ನ ಪುತ್ರಿಯ ಮೇಲೆಯೇ ಎರಗಲು ಬಂದಿದ್ದಾನೆ. ಇದರಿಂದ ಕುಪಿತಳಾದ ಸಾವಿತ್ರಿ ಶ್ರೀಮಂತ ಇಟ್ನಾಳ್ ನನ್ನು ಕಲ್ಲು ಎತ್ತಿಹಾಕಿ ಕೊಂದು ಪತಿಯ ಶವವನ್ನು 2 ಭಾಗ ಮಾಡಿ ಗದ್ದೆಗೆ ಸಾಗಿಸಿದ್ದಾಳೆ. ಒಬ್ಬಳಿಗೆ ಶವ ಸಾಗಿಸಲು ಆಗಲ್ಲ ಎಂದು ದೇಹವನ್ನು 2 ತುಂಡು ಬಾಡಿ ಬ್ಯಾರೆಲ್ ನಲ್ಲಿ ಸಾಗಿಸಿದ್ದಳು. ನಂತರ ಗದ್ದೆಯಲ್ಲಿ ಶವವನ್ನು ಹಾಗೆಯೇ ಜೋಡಿಸಿಟ್ಟು ಹೂತು ಹಾಕಿದ್ದಾಳೆ. ನಂತರ ಬಾವಿಗೆ ಎಸೆದಿದ್ದಾಳೆ.ಆತನ ಬಟ್ಟೆ ಸೇರಿದಂತೆ ಹಲವು ವಸ್ತುಗಳನ್ನು ಸುಟ್ಟು ಹಾಕಿದ್ದಾಳೆ. ಪೊಲೀಸರು ತೀವ್ರ ವಿಚಾರಣೆ ನಡೆಸಿದ ಬಳಿಕ ಆರೋಪಿ ಸಾವಿತ್ರಿ ತಪ್ಪೊಪ್ಪಿಕೊಂಡಿದ್ದಾಳೆ. ಸಾವಿತ್ರಿಯನ್ನು ಬಂಧಿಸಿದ ಚಿಕ್ಕೋಡಿ ಪೊಲೀಸರು ಜೈಲಿಗಟ್ಟಿದ್ದಾರೆ.