ಬೆಂಗಳೂರು : ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ಪಾಪಿ ಮಗನೋರ್ವ ಚಾಕು ಇರಿದು ತಾಯಿಯನ್ನೇ ಹತ್ಯೆಗೈದ ಘಟನೆ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಆಯೇಷಾ (55) ಎಂದು ಗುರುತಿಸಲಾಗಿದೆ. ಮೃತಳ ಮಗ ಸೂಫಿಯಾನ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಹಿರಿಯ ಮಗ ಸೂಫಿಯಾನ್ ಮನೆಯಲ್ಲಿ ಕುಟುಂಬದವರ ಜೊತೆ ಆಗಾಗ ಗಲಾಟೆ ಮಾಡುತ್ತಿದ್ದನು. ಅಂದು ಕಿರಿಯ ಮಗ ಕೆಲಸಕ್ಕೆ ಹೋಗಿದ್ದಾಗ ಹಿರಿಯ ಮಗ ಸೂಫಿಯಾನ್ ತಾಯಿ ಜೊತೆ ಗಲಾಟೆ ಮಾಡಿದ್ದಾನೆ. ಅಲ್ಲದೇ ತಾಯಿಗೆ ಚಾಕುವಿನಿಂದ ಇರಿದು ತಾನೂ ಕೈ ಕುಯ್ದುಕೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ತಾಯಿ ಆಯೇಷಾ (55) ಸ್ಥಳದಲ್ಲೇ ಮೃತಪಟ್ಟಿದ್ದಾರೆ.