ಬೆಂಗಳೂರು: ಬೆಂಗಳೂರು ಹೋಟೆಲ್ ನ ಇಡ್ಲಿ ಸಾಂಬಾರ್ ನಲ್ಲಿ ಜಿರಳೆ ಕಾಣಿಸಿಕೊಂಡಿದ್ದು, ಗ್ರಾಹಕ ಬೆಚ್ಚಿಬಿದ್ದಿದ್ದಾನೆ.
ನಾರಾಯಣ ಹೃದಯಾಲಯದ ಆಸ್ಪತ್ರೆ ಬಳಿಯಿರುವ ಬೊಮ್ಮಸಂದ್ರದ ಬ್ರಾಹ್ಮಿನ್ಸ್ ವೆಜ್ ಕೆಫೆಯಲ್ಲಿ ಈ ಘಟನೆ ನಡೆದಿದೆ.
ಮನು ಎಂಬ ಗ್ರಾಹಕರೊಬ್ಬರು ತಮ್ಮ ಸ್ನೇಹಿತರ ಜೊತೆ ಹೋಟೆಲ್ ಗೆ ಹೋಗಿ ಇಡ್ಲಿ ಆರ್ಡರ್ ಮಾಡಿದ್ದಾರೆ. ನಂತರ ಇಡ್ಲಿಯಲ್ಲಿ ಯಾವುದೇ ಕಪ್ಪು ಪದಾರ್ಥ ಇದೆಯಲ್ಲಾ ಎಂದು ಗಮನಿಸಿದ್ದಾರೆ. ನಂತರ ನೋಡಿದಾಗ ಅದು ಜಿರಳೆ ಎಂಬುದು ಗೊತ್ತಾಗಿದೆ. ಗೋಪಾಲ್ ಎಂಬುವವರು ನಡೆಸುತ್ತಿದ್ದ ಈ ಹೋಟೆಲ್ ನಲ್ಲಿ ಈ ಘಟನೆ ನಡೆದಿದೆ. ಘಟನೆ ಬಳಿಕ ಹೋಟೆಲ್ ಸಿಬ್ಬಂದಿಗಳು ಉಡಾಫೆ ಉತ್ತರ ನೀಡಿದ್ದು, ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.