ರಾಯಚೂರು : ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವಿನ ಸಂಖ್ಯೆ ಮುಂದುವರೆದಿದ್ದು, ರಾಯಚೂರಿನಲ್ಲಿ ಮೂರು ತಿಂಗಳಿನಲ್ಲಿ 9 ಬಾಣಂತಿಯರು ಸಾವನ್ನಪ್ಪಿದ್ದಾರೆ.
ಅಕ್ಟೋಬರ್ ನಲ್ಲಿ ನಾಲ್ವರು ಬಾಣಂತಿಯರು, ನವೆಂಬರ್ ನಲ್ಲಿ ನಾಲ್ವರು ಬಾಣಂತಿಯರು, ಡಿಸೆಂಬರ್ ನಲ್ಲಿ ಓರ್ವ ಬಾಣಂತಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಒಟ್ಟಾರೆ ಮೂರು ತಿಂಗಳಿನಲ್ಲಿ 9 ಬಾಣಂತಿಯರು ಸಾವನ್ನಪ್ಪಿದ್ದಾರೆ.
ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣದ ಬೆನ್ನಲ್ಲೇ ಬೆಳಗಾವಿಯಲ್ಲಿಯೂ ಬಾಣಂತಿಯರು ಹಾಗೂ ಶಿಶುಗಳ ಮಾರಣ ಹೋಮದ ಬಗ್ಗೆ ವರದಿಯಾಗಿತ್ತು. ಇದೀಗ ರಾಯಚೂರಿನಲ್ಲಿಯೂ ಬಾಣಂತಿಯರ ಸರಣಿ ಸಾವಾಗಿರುವ ಬಗ್ಗೆ ವರದಿಯಾಗಿದೆ.ಚಂದ್ರಕಲಾ (26), ರೇಣುಕಮ್ಮ (32), ಮೌಸಮಿ ಮಂಡಲ್ (22) ಹಾಗೂ ಚನ್ನಮ್ಮ ಸೇರಿ 9 ಮಂದಿಯ ಸಾವಾಗಿದೆ.ಬೇರೆ ಬೇರೆ ವೈದ್ಯಕೀಯ ಕಾರಣದಿಂದಾಗಿ ಬಾಣಂತಿಯರು ಮೃತಪಟ್ಟಿದ್ದಾರೆ ಎನ್ನಲಾಗಿದೆ.