ನವದೆಹಲಿ: ಕೇಂದ್ರೀಯ ತನಿಖಾ ದಳವು ಇಂದು ಪಶ್ಚಿಮ ಬಂಗಾಳದ ಸಂದೇಶ್ ಖಾಲಿಯಲ್ಲಿ ವಿದೇಶಿ ಮೇಡ್ ಪಿಸ್ತೂಲ್ ಗಳು ಮತ್ತು ಪೊಲೀಸ್ ರಿವಾಲ್ವರ್ ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ,
ಜಾರಿ ನಿರ್ದೇಶನಾಲಯ ತಂಡವೂ ದಾಳಿ ನಡೆಸಿದೆ. ಈ ಪ್ರದೇಶದಲ್ಲಿ ಶೋಧ ನಡೆಸಿದಾಗ ಸಿಬಿಐ ಶಸ್ತ್ರಾಸ್ತ್ರ ವಶಪಡಿಸಿಕೊಂಡಿದೆ. ಸಿಬಿಐ 3 ವಿದೇಶಿ ನಿರ್ಮಿತ ರಿವಾಲ್ವರ್‌ಗಳು, ಒಂದು ಭಾರತೀಯ ರಿವಾಲ್ವರ್, ಒಂದು ಅಧಿಕೃತ ಪೊಲೀಸ್ ರಿವಾಲ್ವರ್, ಒಂದು ವಿದೇಶಿ ನಿರ್ಮಿತ ಪಿಸ್ತೂಲ್, 1 ದೇಶಿ ನಿರ್ಮಿತ ಪಿಸ್ತೂಲ್, 9 ಎಂಎಂನ 120 ಬುಲೆಟ್‌ಗಳು, .45 ಕ್ಯಾಲಿಬರ್ ನ 50 ಕಾಟ್ರಿಡ್ಜ್ ಗಳು, 38 ಕ್ಯಾಲಿಬರ್ ಮತ್ತು .32 ಕ್ಯಾಲಿಬರ್‌ನ ಎಂಟು ಕಾರ್ಟ್ರಿಡ್ಜ್‌ಗಳು ಸೇರಿ ಹಲವು ವಸ್ತು ವಶಪಡಿಸಿಕೊಂಡಿದೆ.
ಸೆಂಟ್ರಲ್ ಬ್ಯೂರೋ ಇನ್ವೆಸ್ಟಿಗೇಶನ್(ಸಿಬಿಐ), ಬಾಂಬ್ ಪತ್ತೆ ದಳ, ರಾಷ್ಟ್ರೀಯ ಭದ್ರತಾ ಪಡೆ(ಎನ್‌ಎಸ್‌ಜಿ), ಕೇಂದ್ರ ಅರೆಸೇನಾ ಪಡೆಗಳು ಮತ್ತು ಪಶ್ಚಿಮ ಬಂಗಾಳ ಪೊಲೀಸರ ತಂಡಗಳು ಗ್ರಾಮದಲ್ಲಿ ಶೋಧ ಕಾರ್ಯದಲ್ಲಿ ಭಾಗವಹಿಸಿದ್ದವು.
ಮಾಜಿ ಟಿಎಂಸಿ ನಾಯಕ ಎಸ್.ಕೆ. ಷಹಜಹಾನ್‌ಗೆ ಸಂಬಂಧಿಸಿದ ಹಲವು ದೋಷಾರೋಪಣೆ ದಾಖಲೆಗಳು, ದೇಶ ನಿರ್ಮಿತ ಬಾಂಬ್ ಗಳೆಂದು ಶಂಕಿಸಲಾದ ಕೆಲವು ವಸ್ತುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ, ಸಂದೇಶಖಾಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಿಬಿಐ ಪಶ್ಚಿಮ ಬಂಗಾಳದಲ್ಲಿ ಹಲವು ಕಡೆ ದಾಳಿ ನಡೆಸಿದೆ.