ಪ್ರೀತಿಯ ನೆಪದಲ್ಲಿ ನಾಗ್ಪುರದ ಚಾಲಕನೊಬ್ಬ 25 ವರ್ಷದ ಯುವತಿ ಜತೆಗೆ ಕಳೆದ ಐದು ವರ್ಷಗಳಲ್ಲಿ 50 ಬಾರಿ ಬಲವಂತವಾಗಿ ದೈಹಿಕ ಸಂಪರ್ಕ ಸಾಧಿಸಿದ್ದಾನೆ. ಹಲವು ಬಾರಿ ಆಕೆ ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸಿ, ಗರ್ಭವತಿ ಆಗುವ ಅಪಾಯದಿಂದ ಪಾರಾಗಿದ್ದಾಳೆ.
ಆದರೆ ಕಳೆದ ವಾರ ಆಕೆಗೆ ಗರ್ಭಿಣಿ ಆಗಿದ್ದು ತಿಳಿದಾಗ, ಗಾಬರಿಗೊಂಡು ಪ್ರಿಯಕರ, 30 ವರ್ಷದ ಶೊಯಿಬ್ ಖಾನ್ಗೆ ತಿಳಿಸಿದ್ದಾಳೆ. ಆತ ಯೂಟ್ಯೂಬ್ ವಿಡಿಯೋಗಳಲ್ಲಿ ಅಬಾರ್ಷನ್ ಬಗ್ಗೆ ಮಾಹಿತಿ ಇದೆ. ಅದನ್ನು ನೋಡಿಕೊಂಡು ಗರ್ಭಪಾತ ಮಾಡಿಕೊಳ್ಳುವಂತೆ ಸಲಹೆ ಕೊಟ್ಟಿದ್ದಾನೆ. ಆಕೆ ಒಪ್ಪದಿದ್ದಾಗ ಒತ್ತಡ ಹೇರಿದ್ದಾನೆ.
ವಿಡಿಯೋಗಳಲ್ಲಿ ತಿಳಿಸಲಾದ ಮಾತ್ರೆಗಳನ್ನು ತಂದಿಟ್ಟುಕೊಂಡ ಸಂತ್ರಸ್ತೆಯು, ಭ್ರೂಣವನ್ನು ಹೊರತೆಗೆಯಲು ಯತ್ನಿಸಿದ್ದಾಳೆ. ಈ ದುಸ್ಸಾಹಸದ ವೇಳೆ ಆಕೆಯ ರಕ್ತನಾಳಗಳು ಕತ್ತರಿಸಿಹೋಗಿವೆ. ತೀವ್ರ ರಕ್ತಸ್ರಾವದಿಂದ ರಕ್ತದ ಮಡುವಿನಲ್ಲಿ ಮುಳುಗಿ, ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ.
ಕೊನೆಗೆ ಆಕೆಯ ಮನೆಯ ಬಳಿಯಲ್ಲಿನ ಸಂಬಂಧಿಕರಿಗೆ ವಿಷಯ ತಿಳಿದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವ ಸಂತ್ರಸ್ತೆ, ತನ್ನ ಈ ಸ್ಥಿತಿಗೆ ಶೊಯಿಬ್ ಖಾನ್ ಎಂಬಾತ ಕಾರಣ ಎಂದು ಪೊಲೀಸರಿಗೆ ತಿಳಿಸಿದ್ದಾಳೆ. ಕೂಡಲೇ ಖಾನ್ನನ್ನು ಬಂಧಿಸಲಾಗಿದೆ.