ದೇಶದಲ್ಲಿ ಯುವಕರ ಹೃದಯದ ಆರೋಗ್ಯದ ಬಗ್ಗೆ ಕಳವಳ ಹೆಚ್ಚುತ್ತಿರುವ ಮಧ್ಯೆ, ಪುಣೆಯ ಕುಸ್ತಿಪಟು ತಾಲೀಮಿನ ಸಮಯದಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಮಾರುಂಜಿಯ ಮಾಮಸಾಹೇಬ್ ಮೊಹಲ್ ಕುಸ್ತಿ ಸಂಕುಲದಲ್ಲಿ ಬುಧವಾರ ಮುಂಜಾನೆ ತಾಲೀಮು ನಡೆಸಿ ಮೃತಪಟ್ಟಿದ್ದಾರೆ.
ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ ಕುಸ್ತಿಪಟುವಿನ ಹೆಸರು ಸ್ವಪ್ನಿಲ್ ಪಡಲೆ. ತಾಲೀಮಿನ ವೇಳೆ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಅವರು ಪುಣೆಯ ಕುಸ್ತಿ ವಲಯದಲ್ಲಿ ಹೆಸರಾಂತ ಕುಸ್ತಿಪಟುವಾಗಿದ್ದು ಇತ್ತೀಚೆಗೆ ‘ಮಹಾರಾಷ್ಟ್ರ ಚಾಂಪಿಯನ್’ ಪ್ರಶಸ್ತಿಯನ್ನು ಪಡೆದಿದ್ದರು.