
ಪಾಳು ಬಿದ್ದ ಕಟ್ಟಡದ ಟೆರೇಸ್ ಮೇಲೆ ಯುವಕನೊಬ್ಬ ಕಟ್ಟಡದ ತುದಿಯಲ್ಲಿ ಮಲಗಿದ್ದು ತನ್ನ ಕೈಯನ್ನು ಕೆಳಗೆ ನೀಡಿದ್ದು ಅದನ್ನು ಯುವತಿಯೊಬ್ಬಳು ಹಿಡಿದು ನೇತಾಡುತ್ತಿದ್ದಾಳೆ. ತಮ್ಮ ತೋಳುಗಳ ಬಲವನ್ನು ಪರೀಕ್ಷಿಸಲು ಮತ್ತು ರೀಲ್ಸ್ ಕಂಟೆಂಟ್ ರಚಿಸಲು ಈ ರೀತಿ ಪ್ರಯತ್ನಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ವರದಿಗಳ ಪ್ರಕಾರ, ಪುಣೆಯ ಜಂಭುಲ್ವಾಡಿ ಪ್ರದೇಶದ ಸ್ವಾಮಿನಾರಾಯಣ ಮಂದಿರದ ಬಳಿಯ ಕಟ್ಟಡದ ಮೇಲೆ ಈ ಸಾಹಸವನ್ನು ಮಾಡಲಾಗಿದೆ.