ಡಿಜಿಟಲ್ ಡೆಸ್ಕ್ : ವಿಮಾನ ಲ್ಯಾಂಡಿಂಗ್ ವೇಳೆ ಖಾಸಗಿ ಜೆಟ್ ಒಂದು ಅಡ್ಡಬಂದಿದ್ದು, ಚಿಕಾಗೋ ಏರ್ ಪೋರ್ಟ್ ನಲ್ಲಿ ಭಾರಿ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.
ಚಿಕಾಗೋ ಮಿಡ್ವೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಈ ಘಟನೆ ನಡೆದಿದೆ. , ಸೌತ್ವೆಸ್ಟ್ ಏರ್ಲೈನ್ಸ್ ವಿಮಾನವು ರನ್ವೇಯಲ್ಲಿ ಖಾಸಗಿ ಜೆಟ್ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಿದೆ. ಲ್ಯಾಂಡ್ ಮಾಡಲು ಪ್ರಯತ್ನಿಸುತ್ತಿದ್ದ ಸೌತ್ ವೆಸ್ಟ್ ಏರ್ ಲೈನ್ಸ್ ವಿಮಾನವು ವೇಗವಾಗಿ ಹೊರಟಿತ್ತು, ಈ ವೇಳೆ ಖಾಸಗಿ ಜೆಟ್ ಅಡ್ಡಬಂದಿದೆ. ಕೂಡಲೇ ಪೈಲಟ್ ಸಂಯಮ ವಹಿಸಿ ಅಪಘಾತವನ್ನು ತಪ್ಪಿಸಿದ್ದಾರೆ. ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್ಎಎ) ಪ್ರಕಾರ, ಖಾಸಗಿ ಜೆಟ್ ಅನುಮತಿಯಿಲ್ಲದೆ ರನ್ವೇಗೆ ಪ್ರವೇಶಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Southwest Airline pilots SAVED THE DAY! Great job going around at the last minute to avoid a collision from a runway incursion. pic.twitter.com/FjzoqIzH73
— Combat Learjet (@Combat_learjet) February 25, 2025