ಜಗತ್ತಿನಾದ್ಯಂತ ಪ್ರೇಮಿಗಳ ದಿನವನ್ನು ಯುವಕರು ಬಹಳ ವಿಭಿನ್ನವಾಗಿ ಆಚರಿಸುತ್ತಿದ್ದಾರೆ. ಆದರೆ ಆಂಧ್ರಪ್ರದೇಶದಲ್ಲಿ ಒಬ್ಬ ಓರ್ವ ಯುವಕ ಯುವತಿ ಮೇಲೆ ಕತ್ತಿಯಿಂದ ದಾಳಿ ಮಾಡಿ ಆ್ಯಸಿಡ್ ಹಾಕಿದ ಘಟನೆ ನಡೆದಿದೆ.
ಆಂದ್ರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಅನ್ನಮಯ್ಯ ಜಿಲ್ಲೆ ಗುರುಂಕೊಂಡ ತಾಲ್ಲೂಕಿನ ಪ್ಯಾರಂಪಳ್ಳಿಯ ಜನಾರ್ದನ್, ರೆಡ್ಡೆಮ್ಮ ದಂಪತಿಗಳ ಪುತ್ರಿ ಗೌತಮಿ ಮದನಪಲ್ಲೆಯಲ್ಲಿರುವ ಖಾಸಗಿ ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿ, ಮದನಪಲ್ಲೆಯ ಕದಿರಿರೋಡಿನಲ್ಲಿ ‘ಬ್ಯೂಟಿ ಪಾರ್ಲರ್ ‘ನಡೆಸುತ್ತಿದ್ದಾರೆ. ಇಂದು ಬೆಳಿಗ್ಗೆ ಮದನಪಲ್ಲೆ ಅಮ್ಮಚೆರುವು ಮಿಟ್ಟದ ಗಣೇಶ್ ಗೌತಮಿಯ ತಲೆಗೆ ಕತ್ತಿಯಿಂದ ಹೊಡೆದು ಆ್ಯಸಿಡ್ ದಾಳಿ ನಡೆಸಿದ್ದಾರೆ.
ಯುವತಿಯನ್ನು ಗಣೇಶ್ ಪ್ರೀತಿಸುತ್ತಿದ್ದು, ಆದರೆ ಯುವತಿ ಈತನ ಪ್ರೀತಿಯನ್ನು ನಿರಾಕರಿಸಿದ್ದಳು. ಅಲ್ಲದೇ ಈಕೆಗೆ ಬೇರೆ ಹುಡುಗನ ಜೊತೆ ಮದುವೆ ಫಿಕ್ಸ್ ಆಗಿತ್ತು. ಇದರಿಂದ ರೊಚ್ಚಿಗೆದ್ದ ಗಣೇಶ್ ಈ ಕೃತ್ಯ ಎಸಗಿದ್ದಾನೆ.
ದಾಳಿಯಲ್ಲಿ ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯ ಕುಟುಂಬ ಸದಸ್ಯರು ಮದನಪಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಅವಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.. ಯುವತಿಗೆ ಮದುವೆ ನಿಶ್ಚಯವಾಗಿದೆ ಎಂದು ತಿಳಿದ ನಂತರ ಯುವತಿ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಶಂಕಿಸಲಾಗಿದೆ.ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆಸ್ಪತ್ರೆಗೆ ತೆರಳಿ ವಿವರಗಳ ಬಗ್ಗೆ ವಿಚಾರಿಸಿದರು. ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಶೋಧ ನಡೆಯುತ್ತಿದೆ.