
ಉತ್ತರಪ್ರದೇಶದ ಗೊಂಡಾದ ದೇಹತ್ ಕೊಟ್ವಾಲಿ ಪ್ರದೇಶದ ಬ್ರಹ್ಮೈಚ್ ರಸ್ತೆಯಲ್ಲಿರುವ ಸ್ವಯಂಘೋಷಿತ ದೇವಮಾನವ ಅಸಾರಾಮ್ ಬಾಪು ಆಶ್ರಮದಲ್ಲಿ ನಿಲ್ಲಿಸಿದ್ದ ಕಾರ್ ನೊಳಗೆ ಬಾಲಕಿಯ ಮೃತದೇಹ ಪತ್ತೆಯಾಗಿದೆ.
ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಬಾಲಕಿಗಾಗಿ ಹುಡುಕಾಟ ನಡೆಸಲಾಗಿತ್ತು. ಕೊನೆಗೆ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ಅಸಾರಾಮ್ ಬಾಪು ಆಶ್ರಮದ ಆವರಣದಲ್ಲಿದ್ದ ಕಾರೊಳಗೆ ಬಾಲಕಿ ಮೃತದೇಹ ಕಂಡು ಬಂದಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಕಾರ್ ಸುತ್ತಮುತ್ತ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾರ್ ಗೆ ಮುಚ್ಚಲಾಗಿದ್ದ ಕವರ್ ತೆಗೆದು ನೋಡಿದಾಗ ಮೃತದೇಹ ಕಂಡುಬಂದಿದೆ. 2018 ರಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಅಸರಾಮ್ ಬಾಪುಗೆ ಜೋಧಪುರ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.