ಕೆಲ ದಿನಗಳ ಹಿಂದೆ ಮಹಿಳೆಯೊಬ್ಬಳು ತಲೆಗೆ ಗೊರಿಲ್ಲಾ ಗಮ್ ಹಾಕಿಕೊಂಡು ಯಡವಟ್ಟು ಮಾಡಿಕೊಂಡಿದ್ದಳು. ಶಸ್ತ್ರಚಿಕಿತ್ಸೆ ನಡೆಸಿ ಕೂದಲು ಸರಿಪಡಿಸಲಾಗಿತ್ತು. ಈಗ 35 ವರ್ಷದ ಮಹಿಳೆಯೊಬ್ಬಳು ಕಣ್ಣಿಗೆ ಉಗುರಿಗೆ ಹಾಕುವ ಅಂಟನ್ನು ಹಾಕಿಕೊಂಡಿದ್ದಾಳೆ.
ಯುಕೆಯ ಮಹಿಳೆಯೊಬ್ಬಳು ಸಿರೀಸ್ ನೋಡ್ತಿದ್ದಳಂತೆ. ಈ ವೇಳೆ ಕಣ್ಣಿಗೆ ಡ್ರಾಪ್ಸ್ ಹಾಕಿಕೊಳ್ಳಲು ಮುಂದಾಗಿದ್ದಾಳೆ. ಡ್ರಾಪ್ಸ್ ಬದಲು ಅಂಟು ಹಾಕಿಕೊಂಡಿದ್ದಾಳೆ. ತಕ್ಷಣ ಕಣ್ಣು ಉರಿಯಲು ಶುರುವಾಗಿದೆ. ಆಗ ಬಾಟಲಿ ನೋಡಿದ್ದಾಳೆ. ತಪ್ಪಿನ ಅರಿವಾಗಿ ತಕ್ಷಣ ಸಂಬಂಧಿಕರ ಮನೆಗೆ ಹೋಗಿ ಅವರ ಸಹಾಯ ಪಡೆದು ಆಸ್ಪತ್ರೆಗೆ ಹೋಗಿದ್ದಾಳೆ. ಇದಕ್ಕೂ ಮೊದಲು ಕಣ್ಣುಗಳನ್ನು ನೀರಿನಿಂದ ತೊಳೆದಿದ್ದೆ ಎಂದು ಮಹಿಳೆ ಹೇಳಿದ್ದಾಳೆ.
ಮಹಿಳೆ ಕಣ್ಣು ನೋಡಿ ವೈದ್ಯರು ದಂಗಾಗಿದ್ದಾರೆ. ಬೆಚ್ಚಗಿನ ನೀರಿನಲ್ಲಿ ಹತ್ತಿಯನ್ನು ಅದ್ದಿ ವೈದ್ಯರು ಕಣ್ಣುಗಳನ್ನು ಸ್ವಚ್ಚಗೊಳಿಸಿದರಂತೆ. ಮರುದಿನ ಕಣ್ಣು ಬಿಟ್ಟಾಗ ರೆಪ್ಪೆಗಳ ಮೇಲೆ ಅಂಟು ಕುಳಿತಿದ್ದೆಂದು ಮಹಿಳೆ ಹೇಳಿದ್ದಾಳೆ. ಕಣ್ಣು ನೋವಿದ್ದು, ಕಣ್ಣಿನ ಬಣ್ಣ ಬದಲಾಗಿತ್ತು ಎಂದು ಆಕೆ ಹೇಳಿದ್ದಾಳೆ. ಇದೊಂದು ನೋವಿನ ಘಟನೆ. ದೇಹದ ಸೂಕ್ಷ್ಮ ಜಾಗಗಳಿಗೆ ಔಷಧಿ ಬಳಸುವ ವೇಳೆ ಜಾಗೃತರಾಗಿರಿ. ಲೇಬಲ್ ನೋಡಿಯೇ ಬಳಸಿ ಎಂದು ಮಹಿಳೆ ಸಲಹೆ ನೀಡಿದ್ದಾಳೆ.