ಬೆಂಗಳೂರು : ‘ಮದ್ಯ’ ಪ್ರಿಯರಿಗೆ ಬಿಗ್ ಶಾಕ್ ನೀಡಿರುವ ರಾಜ್ಯ ಸರ್ಕಾರ ಶೀಘ್ರವೇ ಮದ್ಯದ ಬೆಲೆ ಏರಿಕೆ ಮಾಡಲಿದೆ. ಹೌದು, ಬಜೆಟ್ ನಲ್ಲಿ ಘೋಷಿಸಿದಂತೆ ಹಲವು ಬ್ರ್ಯಾಂಡ್ ನ ಮದ್ಯದ ಬೆಲೆ ಏರಿಕೆಯಾಗಲಿದೆ.
ಫೆ.16ರಂದು ಮಂಡಿಸಿದ ಬಜೆಟ್ನಲ್ಲಿ ಅಬಕಾರಿ ಇಲಾಖೆಯಲ್ಲಿ ಕಳೆದ ಸಾಲಿಗಿಂತ 2,525 ಕೋಟಿ ರು. ಅಧಿಕ ರಾಜಸ್ವ ಸಂಗ್ರಹಣೆ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದ್ದರು. 2023-24ನೇ ಸಾಲಿನಲ್ಲಿ ಅಬಕಾರಿ ಇಲಾಖೆಯಿಂದ 36 ಸಾವಿರ ಕೋಟಿ ರು. ರಾಜಸ್ವ ಸಂಗ್ರಹಗುರಿ ಇದ್ದು, 2024-25ನೇ ಸಾಲಿನಲ್ಲಿ 38,252 ಕೋಟಿ ರು.ರಾಜಸ್ವ ಸಂಗ್ರಹಣೆ ಗುರಿ ನೀಡಲಾಗಿದೆ.
ಬೇರೆ ರಾಜ್ಯಗಳ ಮದ್ಯಗಳ ಸರಾಸರಿ ಬೆಲೆಯನ್ನು ಪರಿಗಣಿಸಿ ನಮ್ಮಲ್ಲಿ ಯಾವ್ಯಾವ ಸ್ಲ್ಯಾಬ್ಗಳ ಮದ್ಯದ ಬೆಲೆ ಕಡಿಮೆ ಅಂತವುಗಳ ಬೆಲೆ ಹೆಚ್ಚಳ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ. ನೆರೆರಾಜ್ಯಗಳ ಬೆಲೆ ಪಟ್ಟಿ ತರಿಸಿಕೊಂಡು ಹೊಸದಾಗಿ ಬೆಲೆ ನಿಗದಿ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿದೆ.