ಜಂಕ್ ಫುಡ್ ಅಂದ್ರೆ ಮಕ್ಕಳಿಂದ ಹಿಡಿದು, ದೊಡ್ಡವರವರೆಗೂ ತುಂಬಾ ಇಷ್ಟಪಟ್ಟು ತಿಂತಾರೆ. ಆದ್ರೆ ಜಂಕ್ ಫುಡ್ ಇಷ್ಟಪಡೋರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಜಂಕ್ ಫುಡ್ ಧೂಮಪಾನಕ್ಕಿಂತಲೂ ಹೆಚ್ಚು ಹಾನಿಕರ ಅಂತಾ ಸಂಶೋಧನೆಯಿಂದ ಹೊರಬಿದ್ದಿದೆ.
ಈ ಸಂಶೋಧನೆಯಲ್ಲಿ ಜಂಕ್ ಫುಡ್ ಧೂಮಪಾನಕ್ಕಿಂತಲೂ ಆರೋಗ್ಯಕ್ಕೆ ಹೆಚ್ಚು ಹಾನಿಕರ ಎಂದು ತಿಳಿದು ಬಂದಿದೆ.
ಇನ್ನು ಜಂಕ್ ಫುಡ್ ತಿನ್ನುವ ಅಭ್ಯಾಸದಿಂದ ಪೋಷಕಾಂಶಗಳ ಕೊರತೆ ಉಂಟಾಗ್ತಿದೆ. ಇದ್ರಿಂದಾಗಿ ವರ್ಷದಲ್ಲಿ 11 ಮಿಲಿಯನ್ ಜನರು ಸಾಯ್ತಿದ್ದಾರೆ ಎಂದು ಸಂಶೋಧನೆ ತಿಳಿಸಿದೆ.
ಜಂಕ್ ಫುಡ್ ಗೆ ಬಲಿಯಾಗ್ತಿರೋರಲ್ಲಿ ಯುವ ಜನತೆಯೇ ಹೆಚ್ಚು ಎಂದು ಹೇಳಲಾಗಿದೆ. ಅಲ್ಲದೆ ಇವರು ಮಧುಮೇಹ ಮತ್ತು ರಕ್ತದೊತ್ತಡ ಸಮಸ್ಯೆಗೆ ಬಹು ಬೇಗ ತುತ್ತಾಗ್ತಾರೆ ಅಂತಾ ಸಂಶೋಧನೆಯಲ್ಲಿ ಹೇಳಲಾಗಿದೆ.