alex Certify ಲೈಂಗಿಕತೆಯಲ್ಲಿ ತೊಡಗಿಕೊಳ್ಳದ ಮಹಿಳೆಯರ ಬಗ್ಗೆ ಹೊಸ ಅಧ್ಯಯನದಿಂದ ತಿಳಿದುಬಂದಿದೆ ಶಾಕಿಂಗ್ ನ್ಯೂಸ್……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೈಂಗಿಕತೆಯಲ್ಲಿ ತೊಡಗಿಕೊಳ್ಳದ ಮಹಿಳೆಯರ ಬಗ್ಗೆ ಹೊಸ ಅಧ್ಯಯನದಿಂದ ತಿಳಿದುಬಂದಿದೆ ಶಾಕಿಂಗ್ ನ್ಯೂಸ್……!

ಕೆಲವರಿಗೆ ಕೆಲಸ ಮಾಡಿ ಸುಸ್ತಾಗುವುದರಿಂದ ರಾತ್ರಿ ಬೇಗ ನಿದ್ರೆಗೆ ಜಾರುತ್ತಾರೆ. ಆದರೆ ನೀವು ಹೆಚ್ಚು ಕಾಲ ಆರೋಗ್ಯವಾಗಿರಲು ಲೈಂಗಿಕತೆಯಲ್ಲಿ ತೊಡಗಿಕೊಳ್ಳುವುದು ಒಳ್ಳೆಯದು. ಯಾಕೆಂದರೆ ಇತ್ತೀಚಿಗೆ ನಡೆಸಿದ ಅಧ್ಯಯನವೊಂದರಲ್ಲಿ ಮರಣ ಪ್ರಮಾಣ ಮತ್ತು ಲೈಂಗಿಕತೆಯ ನಡುವೆ ಸಂಬಂಧವಿದೆ ಎಂಬುದನ್ನು ಬಹಿರಂಗಪಡಿಸಿದೆ. ವಾರಕ್ಕೊಮ್ಮೆಯಾದರೂ ಲೈಂಗಿಕ ಕ್ರಿಯೆ ನಡೆಸದ ಮಹಿಳೆಯರು ಬಹಳ ಬೇಗನೆ ಸಾವನಪ್ಪುವ ಸಂಭವವಿದೆ ಎಂದು ಅಧ್ಯಯನವು ಕಂಡುಹಿಡಿದಿದೆ. ವಾರಕ್ಕೊಮ್ಮೆಯಾದರೂ ಲೈಂಗಿಕ ಕ್ರಿಯೆ ನಡೆಸುವವರಿಗಿಂತ ಅವರು ಅಕಾಲಿಕವಾಗಿ ಸಾಯುವ ಸಾಧ್ಯತೆ ಹೆಚ್ಚು ಎಂದು ತಿಳಿಸಿದೆ.

ಹಾಗಾಗಿ ಅಧ್ಯಯನದ ಪ್ರಕಾರ ಮಹಿಳೆಯರು ಕನಿಷ್ಠ ಏಳು ದಿನಗಳಿಗೊಮ್ಮೆ ಲೈಂಗಿಕ ಕ್ರಿಯೆ ನಡೆಸುವುದು ಉತ್ತಮ ಎಂದು ತಿಳಿಸಿದೆ. ಲೈಂಗಿಕತೆ ಹೊಂದುವುದು ನಿಮ್ಮ ದೇಹಕ್ಕೆ ವಿರಾಮ ನೀಡುತ್ತದೆ. ಇದು ಅಸಂಖ್ಯಾತ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ, ಒಟ್ಟಾರೆ ನಿಮ್ಮ ಆರೋಗ್ಯವನ್ನು ಉತ್ತೇಜಿಸುತ್ತದೆ.

ಹಾಗಾದ್ರೆ ಲೈಂಗಿಕತೆಯಲ್ಲಿ ತೊಡಗಿಕೊಳ್ಳುವುದರಿಂದ ಆಗುವ ಪ್ರಯೋಜವನ್ನು ತಿಳಿಯಿರಿ:

ಲೈಂಗಿಕತೆಯು ಎಂಡಾರ್ಫಿನ್ ಗಳು ಮತ್ತು ಆಕ್ಸಿಟೋಸಿನ್ ನಂತಹ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ, ಇದು ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಲೈಂಗಿಕ ಚಟುವಟಿಕೆಯಲ್ಲಿ ತೊಡಗುವುದರಿಂದ ಈ ಪ್ರಯೋಜನಕಾರಿ ಹಾರ್ಮೋನುಗಳು ಆಗಾಗ್ಗೆ ಬಿಡುಗಡೆಯಾಗುತ್ತವೆ. ಅಲ್ಲದೇ ಇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಸೋಂಕುಗಳು ಮತ್ತು ಕಾಯಿಲೆಗಳ ವಿರುದ್ಧ ದೇಹ ಹೋರಾಡಲು ಸಹಾಯ ಮಾಡುತ್ತವೆ.

ನಿಯಮಿತವಾಗಿ ಲೈಂಗಿಕತೆಯಲ್ಲಿ ತೊಡಗುವುದರಿಂದ ಹೃದಯ ಬಡಿತ ಮತ್ತು ರಕ್ತ ಪರಿಚಲನೆಯನ್ನು ಹೆಚ್ಚಿಸುವ ಮೂಲಕ ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸುತ್ತದೆ. ಅಷ್ಟೇ ಅಲ್ಲದೇ ವಿಶ್ರಾಂತಿ ಮತ್ತು ಶಾಂತತೆಯ ಭಾವನೆಗೆ ಸಂಬಂಧಿಸಿದ ಹಾರ್ಮೋನ್ ಪ್ರೊಲ್ಯಾಕ್ಟಿನ್ ಬಿಡುಗಡೆಯಾಗಿ ರಾತ್ರಿ ಚೆನ್ನಾಗಿ ನಿದ್ರೆ ಬರುತ್ತದೆ.

ಆಗಾಗ ಲೈಂಗಿಕತೆಯಲ್ಲಿ ತೊಡಗಿಕೊಳ್ಳುವವರು ಖಿನ್ನತೆಯ ಸಮಸ್ಯೆಯನ್ನು ಅನುಭವಿಸುವುದಿಲ್ಲ. ಅದಕ್ಕೂ ಮುಖ್ಯವಾಗಿ, ಖಿನ್ನತೆ ಮತ್ತು ಕಡಿಮೆ ಲೈಂಗಿಕತೆಯಲ್ಲಿ ತೊಡಗುವ ಮಹಿಳೆಯರು ಅಕಾಲಿಕ ಮರಣದ ಹೆಚ್ಚಿನ ಅಪಾಯವನ್ನು ಹೊಂದಿದ್ದಾರೆ ಎನ್ನಲಾಗಿದೆ.

ಹಾಗಾಗಿ ಮಹಿಳೆಯರು ತಮಗೆ ಎಷ್ಟೇ ಕೆಲಸದ ಒತ್ತಡವಿದ್ದರೂ ಅದನ್ನು ಬದಿಗಿಟ್ಟು ನಿಯಮಿತವಾಗಿ ನಿಮ್ಮ ಸಂಗಾತಿಯ ಜೊತೆಗೆ ಲೈಂಗಿಕತೆಯಲ್ಲಿ ತೊಡಗಿಕೊಳ್ಳಿ. ಇದರಿಂದ ನಿಮ್ಮ ಆರೋಗ್ಯವನ್ನು ಉತ್ತಮವಾಗಿಸಿಕೊಳ್ಳಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...