ಬೆಂಗಳೂರು: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹೆಸರಲ್ಲಿ ಹೈಕೋರ್ಟ್ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಿಗೆ ಆನ್ ಲೈನ್ ಮೂಲಕ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ನ್ಯಾಯಮೂರ್ತಿಗಳ ಹೆಸರಲ್ಲಿ ಅಧಿಕಾರಿಯ ವಾಟ್ಸಪ್ ಗೆ 10 ಸಾವಿರ ರೂಪಾಯಿ ಮೌಲ್ಯದ 9 ಅಮೆಜಾನ್ ಗಿಫ್ಟ್ ವೋಚರ್ ಕಳುಹಿಸಿ ಕಿಡಿಗೇಡಿಗಳು ವಂಚಿಸಿದ್ದಾರೆ.
ಆಗಸ್ಟ್ 6ರಂದು ಅಧಿಕಾರಿಯ ವಾಟ್ಸಪ್ ಗೆ ಬೆಳಿಗ್ಗೆ 7:30ರ ಸುಮಾರಿಗೆ ಸಂದೇಶ ರವಾನೆಯಾಗಿದೆ. ಈ ಬಗ್ಗೆ ಬೆಂಗಳೂರು ಸೈಬರ್ ಕ್ರೈಂ ಠಾಣೆಯಲ್ಲಿ ಅಧಿಕಾರಿ ದೂರು ದಾಖಲಿಸಿದ್ದು, ಎಫ್ ಐ ಆರ್ ದಾಖಲಾಗಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.