ಹುಬ್ಬಳ್ಳಿ: ಹಣ ದುಪ್ಪಟ್ಟು ಮಾಡುವುದಾಗಿ ಹೇಳಿ ವೈದ್ಯೆಯಿಂದ 50 ಲಕ್ಷ ಹಣ ಪಡೆದು ವಂಚಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ.
ಪ್ರತಿಷ್ಠಿತ ಕಂಪನಿ ಪ್ರಾಂಚೈಸಿ ಹೆಸರಲ್ಲಿ ಮಣಿಕಂಠನ್ ಕುಟ್ಟತ್ ಎಂಬಾತ ಹುಬ್ಬಳ್ಳಿಯ ರುದ್ರಗಂಗಾ ಲೇಔಟ್ ವೈದ್ಯೆಗೆ 50 ಲಕ್ಷ ರೂಪಾಯಿ ವಂಚಿಸಿದ್ದಾನೆ. ಡಾ.ಶೈಲಾ ಪಾಟೀಲ್ ವಂಚನೆಗೊಳಗಾದ ವೈದ್ಯೆ.
ಡಾ.ಶೈಲಾ ಅವರಿಗೆ ನಿವೃತ್ತಿ ಬಳಿಕ 38 ಲಕ್ಷ ರೂಪಾಯಿ ಹಣ ಬಂದಿದೆ. ತಮ್ಮ ಕಂಪನಿಯಲ್ಲಿ 50 ಲಕ್ಷ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗಲಿದೆ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಹಿಳೆಗೆ ಯಾಮಾರಿಸಿದ್ದಾನೆ.
ಭಾವನೆಗಳ ಮೇಲೆ ಹಿಡಿತ ತಪ್ಪಿದ್ಯಾ…..? ಹಾಗಾದ್ರೆ ಪಿತ್ತವನ್ನು ಪರೀಕ್ಷಿಸಿಕೊಳ್ಳಿ….!
ನಕಲಿ ಕಾಗದ ಪತ್ರ ಎಂಬುದು ಗೊತ್ತಾಗುತ್ತಿದ್ದಂತೆ ವೈದ್ಯೆ ಶಾಕ್ ಆಗಿದ್ದು, ಗೋಕುಲ ರಸ್ತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.