ವಿಜಯಪುರ: ಸಾಲಬಾಧೆಗೆ ಮನನೊಂದ ಬಿ ಎಸ್ ಎಫ್ ಮಾಜಿ ಯೋಧ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಕ್ಕಳಮೇಲಿ ಗ್ರಾಮದಲ್ಲಿ ನಡೆದಿದೆ.
ರೇವಣ್ಣಸಿದ್ದ ಗಾಣಿಗೇರ ಊರ್ಫ್ ದೇಸಾಯಿ ಆತ್ಮಹತ್ಯೆಗೆ ಶರಣಾದ ಮಾಜಿ ಯೋಧ. ಸಾಲಬಾಧೆಗೆ ಹಲವು ದಿನಗಳಿಂದ ಮನನೊಂದಿದ್ದ ರೇವಣ್ಣಸಿದ್ದ ಮರಕ್ಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.
ಸಿಂಧಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.