ರಾಯಚೂರು: ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ನದಿ ಸ್ನಾನಕ್ಕೆಂದು ತೆರಳಿದ್ದ ಇಬ್ಬರು ನೀರುಪಾಲಾಗಿರುವ ಘಟನೆ ರಾಯಚೂರಿನ ಶಕ್ತಿನಗರದ ಬಳಿ ಕೃಷ್ಣಾನದಿಯಲ್ಲಿ ನಡೆದಿದೆ.
ಗಣೇಶ್ (42), ಉದಯ್ ಕುಮಾರ್ (43) ಮೃತರು. ಐದಾರು ಸ್ನೇಹಿತರೊಂದಿಗೆ ಇಬ್ಬರೂ ಸಂಕ್ರಾಂತಿ ಹಬ್ಬ ಹಾಗೂ ಪುಣ್ಯಸ್ನಾನಕ್ಕೆಂದು ಕೃಷ್ಣಾನದಿಗೆ ಇಳಿದಿದ್ದಾರೆ. ಈ ವೇಳೆ ನದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮೃತದೇಹಕ್ಕಾಗಿ ಶೋಧ ನಡೆಸಲಾಗುತ್ತಿದೆ. ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.