ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ವರದಿಯಲ್ಲಿ ಆಘಾತಕಾರಿ ಮಾಹಿತಿಯೊಂದು ಬಹಿರಂಗವಾಗಿದ್ದು, ಶಿಕ್ಷೆಯ ಅವಧಿ ಮುಗಿದರೂ ಸಹ ದಂಡ ಪಾವತಿಸಲು ಸಾಧ್ಯವಾಗದೆ 678 ಮಂದಿ ಕೈದಿಗಳು ಇನ್ನೂ ಜೈಲಿನಲ್ಲಿಯೇ ಇದ್ದಾರೆನ್ನಲಾಗಿದೆ.
ಈ ಪೈಕಿ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 172 ಮಂದಿ ಕೈದಿಗಳಿದ್ದು, ಮಹಾರಾಷ್ಟ್ರದಲ್ಲಿ 75, ಮಧ್ಯಪ್ರದೇಶದಲ್ಲಿ 68, ಉತ್ತರಾಖಂಡದಲ್ಲಿ 41, ಕೇರಳದಲ್ಲಿ 43, ಪಶ್ಚಿಮ ಬಂಗಾಳದಲ್ಲಿ 34, ಮಣಿಪುರದಲ್ಲಿ 35, ಕರ್ನಾಟಕದಲ್ಲಿ 33, ರಾಜಸ್ಥಾನದಲ್ಲಿ 32, ಜಾರ್ಖಂಡ್ ನಲ್ಲಿ 16, ಪಂಜಾಬ್ ನಲ್ಲಿ 16, ಹರಿಯಾಣದಲ್ಲಿ 15, ಬಿಹಾರದಲ್ಲಿ 14, ಅಸ್ಸಾಂನಲ್ಲಿ 13, ಛತ್ತಿಸ್ಗಢದಲ್ಲಿ 13, ಒಡಿಸ್ಸಾದಲ್ಲಿ 13, ಹಿಮಾಚಲ ಪ್ರದೇಶದಲ್ಲಿ 10, ಗುಜರಾತಿನಲ್ಲಿ 9, ದೆಹಲಿಯಲ್ಲಿ 9, ತಮಿಳುನಾಡಿನಲ್ಲಿ 9, ಗೋವಾದಲ್ಲಿ 3, ಆಂಧ್ರಪ್ರದೇಶದಲ್ಲಿ 2, ಜಮ್ಮು ಕಾಶ್ಮೀರ, ಮೇಘಾಲಯ ಹಾಗೂ ಮಿಜೋರಾಂನಲ್ಲಿ ತಲಾ ಓರ್ವ ಕೈದಿ ಇದ್ದಾರೆ.
ಈ ಕೈದಿಗಳು ತಮ್ಮ ಅಪರಾಧಗಳಿಗೆ ಜೈಲು ಶಿಕ್ಷೆಗೆ ಒಳಗಾಗಿದ್ದು, ಜೊತೆಗೆ ದಂಡವನ್ನು ಸಹ ವಿಧಿಸಲಾಗಿತ್ತು. ದಂಡ ಪಾವತಿಸದಿದ್ದರೆ ಹೆಚ್ಚುವರಿಯಾಗಿ ಮತ್ತಷ್ಟು ಕಾಲ ಕಾರಾಗೃಹ ವಾಸ ಮುಂದುವರಿಯಲಿದೆ ಎಂದು ನ್ಯಾಯಾಲಯದ ತೀರ್ಪಿನಲ್ಲಿ ಹೇಳಲಾಗಿತ್ತು. ಹೀಗಾಗಿ ಇವರ ಜೈಲು ಶಿಕ್ಷೆಯ ಅವಧಿ ಮುಗಿದಿದ್ದರೂ ದಂಡ ಪಾವತಿಸಲು ಹಣವಿಲ್ಲದ ಕಾರಣಕ್ಕೆ ಇವರುಗಳ ಜೈಲುವಾಸ ಮುಂದುವರೆದಿದೆ.