ದೆಹಲಿಯ ಎಂಸಿಡಿ ಶಾಲೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರನ್ನು ಅಪರಿಚಿತ ವ್ಯಕ್ತಿ ಬಲವಂತವಾಗಿ ವಿವಸ್ತ್ರಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಇದುವರೆಗೆ ಯಾವುದೇ ಬಂಧನವಾಗಿಲ್ಲ.
ದೆಹಲಿ ಮಹಿಳಾ ಆಯೋಗವು (ಡಿಸಿಡಬ್ಲ್ಯು) ದೆಹಲಿ ಪೊಲೀಸ್ ಮತ್ತು ಪೂರ್ವ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಇಡಿಎಂಸಿ) ಕಮಿಷನರ್‌ಗೆ ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
ಮಕ್ಕಳು ಬೆಳಗ್ಗೆ ಅಸೆಂಬ್ಲಿಯಿಂದ ಹಿಂತಿರುಗಿದಾಗ ಆರೋಪಿ ತರಗತಿಗೆ ಪ್ರವೇಶಿಸಿದ್ದಾನೆ. ತರಗತಿಯ ಮುಂದೆ ಸ್ವತಃ ವಿವಸ್ತ್ರಗೊಳಿಸುವ ಮೊದಲು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎನ್ನಲಾಗಿದೆ. ಏಪ್ರಿಲ್ 30 ರಂದು ಈ ಘಟನೆ ನಡೆದಿದೆ.
‘ರಾಗಿ’ ಬೆಳೆಗಾರರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ
ಇನ್ನು, ಈ ಘಟನೆಯ ಬಗ್ಗೆ ವಿದ್ಯಾರ್ಥಿನಿಯರು ಪ್ರಾಂಶುಪಾಲರು ಮತ್ತು ಶಿಕ್ಷಕರಿಗೆ ತಿಳಿಸಿದ್ದಾರೆ. ಆದರೆ ಘಟನೆಯ ಬಗ್ಗೆ ಮೌನವಾಗಿರಲು ಮತ್ತು ಮರೆತುಬಿಡುವಂತೆ ಶಿಕ್ಷಕರು ಹೇಳಿದ್ದಾಗಿ ಆರೋಪಿಸಲಾಗಿದೆ.
ತರಗತಿಗೆ ಪ್ರವೇಶಿಸಿದ ಕಿಡಿಗೇಡಿಯು ಬಾಲಕಿಯೊಬ್ಬಳ ಬಟ್ಟೆ ತೆಗೆದು ಅಶ್ಲೀಲ ಮಾತುಗಳನ್ನಾಡಿದ್ದಾನೆ. ನಂತರ ಅವನು ಇನ್ನೊಬ್ಬ ಹುಡುಗಿಯ ಬಳಿಗೆ ಹೋಗಿ ಆಕೆಯ ಬಟ್ಟೆಗಳನ್ನು ಸಹ ಕಳಚಿದ್ದಾನೆ. ನಂತರ, ಆರೋಪಿ ತರಗತಿಯ ಬಾಗಿಲು ಮುಚ್ಚಿ ವಿದ್ಯಾರ್ಥಿಗಳ ಮುಂದೆ ಮೂತ್ರ ವಿಸರ್ಜನೆ ಮಾಡಿದ್ದಾನೆ.
ಪೋಕ್ಸೊ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಶೀಘ್ರವೇ ಆರೋಪಿಯನ್ನು ಬಂಧಿಸಲಾಗುವುದು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಆರೋಪಿ ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಖಾಕಿ ಪಡೆ ತಿಳಿಸಿದೆ.