ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಮೂರನೇ ಅಲೆ ಆತಂಕ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಡುವೆ ಮತ್ತೊಂದು ಆತಂಕಕಾರಿ ವಿಷಯ ಬಹಿರಂಗವಾಗಿದೆ. ಬೆಂಗಳೂರಿನಲ್ಲಿ ಕೊರೊನಾ ಹೊಸ ತಳಿ ಪತ್ತೆಯಾಗಿದೆ.
ಬೆಂಗಳೂರಿನಲ್ಲಿ ಡೆಲ್ಟಾ ವೈರಸ್ ಜೊತೆಗೆ ಇದೀಗ 8 ಜನರಲ್ಲಿ ಕಪ್ಪಾ ತಳಿ ಪತ್ತೆಯಾಗಿರುವುದು ದೃಢಪಟ್ಟಿದೆ. ಈವರೆಗೆ 192 ಜನರ ಗಂಟಲು ದ್ರವವನ್ನು ಜಿನೋಮಿಕ್ ಸೀಕ್ವೆನ್ಸ್ ಟೆಸ್ಟ್ ಗೆ ರವಾನಿಸಲಾಗಿತ್ತು. ಇದೀಗ ವರದಿ ಬಂದಿದ್ದು, 148 ಜನರಲ್ಲಿ ಡೆಲ್ಟಾ ತಳಿ ಸೋಂಕು ಪತ್ತೆಯಾಗಿದ್ದರೆ, 8 ಜನರಲ್ಲಿ ಕಪ್ಪಾ ತಳಿಯ ಕೊರೊನಾ ಸೋಂಕು ಪತ್ತೆಯಾಗಿದೆ.
ಚಿನ್ನದ ಪದಕ ವಿಜೇತ ʼನೀರಜ್ ಚೋಪ್ರಾʼಗೆ ಘೋಷಿಸಲ್ಪಟ್ಟ ಬಹುಮಾನದ ಮೊತ್ತ ಎಷ್ಟು ಗೊತ್ತಾ……?
ಒಟ್ಟಾರೆ ರಾಜಧಾನಿಯಲ್ಲಿ ಕ್ಷಣ ಕ್ಷಣಕ್ಕೂ ಕೋವಿಡ್ ರೂಪಾಂತರಿಯ ಅಟ್ಟಹಾಸ ಮಿತಿ ಮೀರುತ್ತಿದ್ದು, ಆಗಸ್ಟ್ 15ರ ಬಳಿಕ ಮತ್ತೆ ಕಠಿಣ ನಿಯಮಗಳು ಜಾರಿಗೆ ಬರುವ ಸಾಧ್ಯತೆ ದಟ್ಟವಾಗಿದೆ.