ವಿಜಯನಗರ: ಹೂವಿನಹಡಗಲಿ ಮಿನಿ ವಿಧಾನಸೌಧವನ್ನು ಮಾರಾಟಕ್ಕಿಟ್ಟಿದ್ದ ರೈತ ಇದೀಗ ಶವವಾಗಿ ಪತ್ತೆಯಾಗಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ನಂದಿಹಳ್ಳಿಯ ರೈತ ಬಣಕಾರ ಮಲ್ಲಪ್ಪ ಅವರ ಜಮೀನಿನಲ್ಲಿ ಮಿನಿ ವಿಧಾನಸೌಧ ನಿರ್ಮಾಣವಾಗಿತ್ತು. ಮಿನಿ ವಿಧಾನಸೌಧ ವಿರೋಧಿಸಿ ರೈತ ಹೋರಾಟ ನಡೆಸಿದ್ದರು. ಲೇಔಟ್ ನಿರ್ಮಾಣ ಮಾಡಿದವರ ವಿರುದ್ಧ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದರು. ಆದರೆ ಜನವರಿ 30ರಂದು ಇದ್ದಕ್ಕಿದ್ದಂತೆ ಬಣಕಾರ ಮಲ್ಲಪ್ಪ ನಾಪತ್ತೆಯಾಗಿದ್ದರು.
ಆದರೆ ಇದೀಗ ರೈತ ಬಣಕಾರ ಮಲ್ಲಪ್ಪ ತನ್ನ ಜಮೀನಿನ ಪಕ್ಕದಲ್ಲೇ ಶವವಾಗಿ ಪತ್ತೆಯಾಗಿದ್ದು, ಮೃತದೇಹದ ಪಕ್ಕದಲ್ಲಿ ವಿಷದ ಬಾಟಲ್ ಕೂಡ ಪತ್ತೆಯಾಗಿದೆ. ಜಮೀನು ವಶಕ್ಕೆ ಪಡೆದು ಮಿನಿ ವಿಧಾನಸೌಧ, ಲೇಔಟ್ ಗಳನ್ನು ನಿರ್ಮಿಸಲಾಗಿದೆ ತನಗೆ ಪರಿಹಾರವನ್ನೂ ಕೊಟ್ಟಿಲ್ಲ ಎಂದು ಕಣ್ಣೀರಿಟ್ಟಿದ್ದ ರೈತ ಇದೀಗ ಇದ್ದಕ್ಕಿದ್ದಂತೆ ಶವವಾಗಿ ಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.