ಮಂಡ್ಯ: ಮಗನ ಸಾವಿನ ಸುದ್ದಿ ಕೇಳಿ ಶಾಕ್ ಆದ ತಾಯಿ ಕೂಡ ಮೃತಪಟ್ಟ ಹೃದಯವಿದ್ರಾವಕ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಗಿಡುವಿನ ಹೊಸಹಳ್ಳಿ ಕೊಪ್ಪಲಿನಲ್ಲಿ ನಡೆದಿದೆ.
45 ವರ್ಷದ ಮಗ ಕುಶಾಲ್ ಲೋ ಬಿಪಿಯಿಂದ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಆಘಾತಕ್ಕೀಡಾದ ಅವರ ತಾಯಿ 69 ವರ್ಷದ ಲಕ್ಷ್ಮಮ್ಮ ಕುಸಿದು ಬಿದ್ದಿದ್ದಾರೆ. ಹೃದಯಾಘಾತಕ್ಕೀಡಾಗಿ ತಾಯಿಯೂ ಕೊನೆಯುಸಿರೆಳೆದಿದ್ದಾರೆ.
ಟಿವಿ ನೋಡುತ್ತಿದ್ದ ಕುಶಾಲ್ ಗೆ ಬಿಪಿ ಲೋ ಆಗಿದೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆಸ್ಪತ್ರೆಗೂ ಬರುವ ಮುನ್ನವೇ ಕುಶಾಲ್ ಮೃತಪಟ್ಟಿದ್ದರು. ಮಗನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದಂತೆ ಅಮ್ಮ ಲಕ್ಷ್ಮಮ್ಮ ಕೂಡ ಆಸ್ಪತ್ರೆಗೆ ಬಂದಿದ್ದಾರೆ. ಆದರೆ ಮಗ ಸಾವನ್ನಪ್ಪಿರುವ ಸುದ್ದಿ ಕೇಳುತ್ತಲೇ ತಾಯಿಗೂ ಹೃದಯಾಘಾತವಾಗಿದೆ. ತಾಯಿಯೂ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ.
ನಾಗಮಂಗಲ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.