alex Certify SHOCKING NEWS: ಮಕ್ಕಳ ಮೇಲೆ ಯುವಕರ ಕ್ರೌರ್ಯ; ಮರಕ್ಕೆ ಕಟ್ಟಿ ಹಾಕಿ ಸಿಗರೇಟ್ ಸೇದುವಂತೆ ಧಮ್ಕಿ ಹಾಕಿದ ಪುಂಡರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಮಕ್ಕಳ ಮೇಲೆ ಯುವಕರ ಕ್ರೌರ್ಯ; ಮರಕ್ಕೆ ಕಟ್ಟಿ ಹಾಕಿ ಸಿಗರೇಟ್ ಸೇದುವಂತೆ ಧಮ್ಕಿ ಹಾಕಿದ ಪುಂಡರು

ಸಿಗರೇಟ್ ಸೇವನೆಯಿಂದ ಕೋವಿಡ್​ಗೆ ತುತ್ತಾಗುವ ಸಾಧ್ಯತೆ ಕಡಿಮೆ ಎಂದು ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆ! | Covid is less likely to be affected by cigarette consumption Petition Filled in Bombay High ...

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪುಟ್ಟ ಮಕ್ಕಳ ಮೇಲೆ ದೌರ್ಜನ್ಯವೆಸಗಿರುವ ಯುವಕರ ಗುಂಪು, ಮಕ್ಕಳನ್ನು ಮರಕ್ಕೆ ಕಟ್ಟಿ ಹಾಕಿ ಸಿಗರೇಟ್ ಸೇದುವಂತೆ ಬಲವಂತ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಕೆ.ಆರ್.ಪುರದ ದೇವಸಂದ್ರ ವಾರ್ಡ್ ನಲ್ಲಿ ಸರ್ಕಾರಿ ಶಾಲಾ ಆವರಣದಲ್ಲಿ ಗಾಂಜಾ ಮತ್ತಿನಲ್ಲಿದ್ದ ಯುವಕರ ಗುಂಪು ಅಲ್ಲಿದ್ದ ಮಕ್ಕಳನ್ನು ಮರಕ್ಕೆ ಕಟ್ಟಿ ಹಾಕಿ ಬೆದರಿಕೆಯೊಡ್ಡಿ ಬಲವಂತದಿಂದ ಮಕ್ಕಳಿಂದ ಸಿಗರೇಟ್ ಸೇದಿಸಿ ಟಾರ್ಚರ್ ನೀಡಿದ್ದಾರೆ.

BIG NEWS: ಕನ್ನಡದ ‘ಅಕ್ಷಿ’ಗೆ ಅತ್ಯುತ್ತಮ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ; ರಜನಿಕಾಂತ್ ಗೆ ದಾದಾಸಾಹೇಬ್ ಫಾಲ್ಕೆ ಪುರಸ್ಕಾರ

ಯುವಕರ ಗುಂಪು ಮಕ್ಕಳಿಗೆ ಹಿಂಸೆ ನೀಡಿ ಕುಚೇಷ್ಟೇ ಮೆರೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪುಂಡರ ವಿರುದ್ಧ ಮಹದೇವಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಕುರಿತು ಅಳಲು ತೋಡಿಕೊಂಡಿರುವ ಪೋಷಕರು, ಹಲವು ಯುವಕರು ಮಕ್ಕಳನ್ನು ಕರೆದೊಯ್ದು, ತಮ್ಮ ಕೆಲಸಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಮದ್ಯಪಾನ, ಸಿಗರೇಟ್ ಸೇದುವಾಗ ಅವರಿಗೆ ಮಕ್ಕಳು ನೀರು ತಂದುಕೊಡಬೇಕು. ಹೇಳಿದ ಕೆಲಸ ಮಾಡಬೇಕು ಇಲ್ಲವಾದರೆ ಶಾಲೆ ಬಳಿ ಹೋಗಿ ಮಕ್ಕಳ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಈಗ ಮಕ್ಕಳನ್ನು ಮರಕ್ಕೆ ಕಟ್ಟಿಹಾಕಿ ಸಿಗರೇಟ್ ಸೇದುವಂತೆ ಟಾರ್ಚರ್ ಕೊಡುತ್ತಿದ್ದಾರೆ. ಪುಂಡರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...